ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುವಿಕೆ ಯತ್ನವನ್ನುಈ ವರ್ಷ ಜೂನ್‌ವರೆಗೆ ಒಟ್ಟು 33 ಬಾರಿ ಪಾಕಿಸ್ತಾನ ನಡೆಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.

ಗಡಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅಜಯ್ ಭಟ್, ಭಾರತದ ಗಡಿ ನುಸುಳಲು ಯತ್ನಿಸಿದ ಪಾಕಿಸ್ತಾನದ 11 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 20 ಉಗ್ರರನ್ನು ಸೆರೆ ಹಿಡಿಯಲಾಗಿದೆ. ಈ ವರ್ಷ ಚೀನಾದಿಂದ ಯಾವುದೇ ಗಡಿ ನುಸುಳುವಿಕೆ ಯತ್ನ ನಡೆದಿಲ್ಲ ಎಂದು ಉತ್ತರಿಸಿದರು.

ಭಾರತ ಮತ್ತು ಬಾಂಗ್ಲಾದೇಶದ ಗಡಿ ಕುರಿತು ಮಾತನಾಡಿದ ಅಜಯ್ ಭಟ್, ಈ ವರ್ಷ ಜೂನ್ ವರೆಗೆ ಬಾಂಗ್ಲಾದೇಶದಿಂದ ಒಟ್ಟು 441 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. ನೇಪಾಳ ಗಡಿಯಲ್ಲಿ 11 ಒಳನುಸುಳುಕೋರರನ್ನು ಬಂಧಿಸಲಾಗಿದೆ ಎಂದರು.

ಭಾರತ-ಮಾಯನ್ಮಾರ್ ಗಡಿಯಲ್ಲಿ, ಮಾಯನ್ಮಾರ್‌ನ8,486 ನಾಗರಿಕರು ಮತ್ತು ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. ಈ ಪೈತಿ 5,796 ಮಂದಿಯನ್ನು ಗಡಿಯಿಂದ ವಾಪಸ್ ಕಳುಹಿಸಲಾಗಿದೆ. 2,690 ಮಂದಿ ಭಾರತದಲ್ಲೇ ಉಳಿದುಕೊಂಡಿದ್ದಾರೆ ಎಂದು ಅಜಯ್ ಭಟ್ ಮಾಹಿತಿ ನೀಡಿದರು.

ವಿಶ್ವ ಸಿಂಹ ದಿನ: ಸಿಂಹಗಳ ಕೌತುಕ ಜಗತ್ತಿನಲ್ಲೊಂದು ಸುತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.