ಪಟ್ನಾ: ಕರ್ನಾಟಕದವರಾದ ಪವನ್ ಕುಮಾರ್ ಭೀಮಪ್ಪ ಭಜಂತ್ರಿ ಅವರು ಭಾನುವಾರ ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲರಾದ ಅರಿಫ್ ಮೊಹಮ್ಮದ್ ಖಾನ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಮ್ರಾಟ್ ಚೌಧರಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

2025ರ ಅಕ್ಟೋಬರ್ 22ರಂದು ನಿವೃತ್ತಿ ಹೊಂದಲಿದ್ದಾರೆ.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ನಾಥ್ ಅವರನ್ನೊಳಗೊಂಡ ಕೊಲಿಜಿಯಂ ಸಮಿತಿ ಪವನ್ಕುಮಾರ್ ಅವರನ್ನು ಪಟ್ನಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿತ್ತು.

ಬೆಂಗಳೂರಿನಲ್ಲಿ ಕಾನೂನು ಅಧ್ಯಯನ

ಬೆಂಗಳೂರು: ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಲು ಶಿಪಾರಸ್ಸು ಮಾಡಲಾಗಿರುವ ಪವನ್ ಕುಮಾರ್ ಭೀಮಪ್ಪ ಭಜಂತ್ರಿ ಅವರು 1963ರ ಅಕ್ಟೋಬರ್ 23ರಂದು ಜನಿಸಿದರು.

ಬೆಂಗಳೂರಿನ ಎಸ್ಜೆಆರ್ಸಿ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ ಅವರು 1990ರಲ್ಲಿ ವಕೀಲರಾಗಿ ಸನ್ನದು ನೋಂದಣಿ ಮಾಡಿಸಿ ವೃತ್ತಿ ಆರಂಭಿಸಿದರು. 2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ಪಂಜಾಬ್–ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಗೊಂಡಿದ್ದ ಅವರು, ನಂತರದಲ್ಲಿ ಪಟ್ನಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2021ರ ಅ.20ರಂದು ವರ್ಗಾವಣೆಗೊಂಡಿದ್ದರು.
.PM ಮೋದಿ ತಾಯಿಯ AI ವಿಡಿಯೊ ತೆಗೆಯಲು ಕಾಂಗ್ರೆಸ್ಗೆ ಪಟ್ನಾ ಹೈಕೋರ್ಟ್ ನಿರ್ದೇಶನ.ಪಟ್ನಾ ಹೈಕೋರ್ಟ್ 'ಸಿಜೆ'ಯಾಗಿ ಕರ್ನಾಟಕ HC ನ್ಯಾ.ಪವನ್ಕುಮಾರ್ ಹೆಸರು ಶಿಫಾರಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.