ನವದೆಹಲಿ: ‘ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಿಂದ ದೂರ ಉಳಿದಿರುವ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಒಕ್ಕೂಟದ ಸದಸ್ಯರನ್ನು ಜನ ಬಹಿಷ್ಕರಿಸುವ ಸಾಧ್ಯತೆ ಇದೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿರುವ ವಾಲ್ಮೀಕಿ ದೇಗುಲವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ದೆಹಲಿಯ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರೊಂದಿಗೆ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹೊಸ ಸಂಸತ್ ಭವನ ಉದ್ಘಾಟನಾ ಸಮಾರಂಭ ಮತ್ತು ಪ್ರಧಾನಮಂತ್ರಿ ಭಾಷಣವನ್ನು ಅವರು ಬಹಿಷ್ಕರಿಸಿದರು. ಇದಕ್ಕೆ ಪ್ರತಿಯಾಗಿ ಜನರು ವಿರೋಧ ಪಕ್ಷದವರನ್ನು ಬಹಿಷ್ಕರಿಸಿದ್ದಾರೆ. ಇದೀಗ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಿಂದ ದೂರ ಉಳಿಯಲು ವಿರೋಧ ಪಕ್ಷದವರು ನಿರ್ಧರಿಸಿದ್ದಾರೆ. ಜನರು ಈಗಲೂ ಇವರನ್ನು ಬಹಿಷ್ಕರಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.

‘ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಇತರ ಸದಸ್ಯರು ದೊರೆತ ಅವಕಾಶವನ್ನು ನಿರಾಕರಿಸಿದ್ದಾರೆ. ಆ ಮೂಲಕ ಭಗವಾನ್ ರಾಮನ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ’ ಎಂದು ಠಾಕೂರ್ ಆರೋಪಿಸಿದರು.

‘ವಿರೋಧ ಪಕ್ಷಗಳ ನಾಯಕರು ಹೇಳಿಕೆಗಳ ಮೂಲಕ ದೇಗುಲದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಂತಿಮವಾಗಿ ಅವರು ಭಗವಾನ್ ರಾಮನ ಮುಂದೆ ಶರಣಾಗಲೇಬೇಕು’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷದ ಬಹಳಷ್ಟು ಮುಖಂಡರು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತಿಗೆ ಗಮನ ನೀಡದೇ, ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಸಚಿವ ಅನುರಾಗ್ ಹೇಳಿದ್ದಾರೆ.
.ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಿರಲು ಶರದ್ ಪವಾರ್ ನಿರ್ಧಾರ.ರಾಮಮಂದಿರ ಉದ್ಘಾಟನೆಯನ್ನು BJP ರಾಜಕೀಯಗೊಳಿಸಿದೆ; ಭಾಗವಹಿಸುವುದು ಕಷ್ಟ– ರಾಹುಲ್.ರಾಮಮಂದಿರ: ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ರಾಮ ಜನ್ಮಭೂಮಿ ಮಣ್ಣು ಉಡುಗೊರೆ.ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಕೇಸರಿ ಧ್ವಜ, ಪೋಸ್ಟರ್ಗೆ ಭಾರೀ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.