ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರ ಅವಹೇಳನ ಮಾಡಿದ ಆರೋಪ: ಮೋಹನ್‌ ಭಾಗವತ್ ವಿರುದ್ಧ ದೂರು ದಾಖಲು

Last Updated 9 ಫೆಬ್ರುವರಿ 2023, 3:22 IST
ಅಕ್ಷರ ಗಾತ್ರ

ಮುಜಾಫರ್‌ಪುರ: ಆರ್‌ಎಸ್‌ಎಸ್‌ ಸರ ಸಂಘಚಾಲಕ ಮೋಹನ್‌ ಭಾಗವತ್‌ ಅವರು ಇತ್ತೀಚೆಗೆ ಮಾಡಿದ್ದ ಭಾಷಣದಲ್ಲಿ ಬ್ರಾಹ್ಮಣರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಹಾರದ ನ್ಯಾಯಾಲಯದಲ್ಲಿ ಮಂಗಳವಾರ ದೂರು ದಾಖಲಿಸಲಾಗಿದೆ.

ಮುಂಬೈನಲ್ಲಿ ಸೋಮವಾರ ನಡೆದಿದ್ದ ಕಾರ್ಯಕ್ರಮವೊಂದ ರಲ್ಲಿ ಭಾಗವಹಿಸಿದ್ದ ಭಾಗವತ್‌ ಅವರು ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಕೀಲ ಸುಧೀರ್ ಕುಮಾರ್‌ ಓಜಾ ಅವರು ಮುಜಾಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರು ತಮ್ಮ ಮರಾಠಿ ಭಾಷಣದಲ್ಲಿ, ‘ಹಿಂದೂ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಠಿಣ ಜಾತಿ ವ್ಯವಸ್ಥೆಗೆ ಪಂಡಿತರು (ಪುರೋಹಿತ ವರ್ಗ) ಕಾರಣಕರ್ತರು’ ಎಂದು ದೂಷಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇದೇ 20ಕ್ಕೆ ನಿಗದಿಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT