ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದಾಗಿ ಎನ್‌ಇಇಟಿ ಪರೀಕ್ಷೆಗೆ ಕೋರಿ ಅರ್ಜಿ

Published 10 ಜೂನ್ 2024, 16:07 IST
Last Updated 10 ಜೂನ್ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ಎನ್‌ಇಇಟಿ–ಯುಜಿ 2024 ಫಲಿತಾಂಶವನ್ನು ಹಿಂದಕ್ಕೆ ಪಡೆದು, ಹೊಸದಾಗಿ ಪರೀಕ್ಷೆ ನಡೆಸಬೇಕು ಎಂಬ ಮನವಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಮೇ 5ರಂದು ನಡೆದ ಎನ್‌ಇಇಟಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಶೇಖ್ ರೋಷನ್ ಮೊಹಿದಿನ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನೆರವಾಗುವ ಸಂಘಟನೆಯೊಂದರ ಸದಸ್ಯರು ತಾವು ಎಂದು ಅವರು ಹೇಳಿಕೊಂಡಿದ್ದಾರೆ. ಎನ್‌ಇಇಟಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತ್ವರಿತ ತನಿಖೆಗೆ ಹಾಗೂ ತಪ್ಪು ಮಾಡಿದವರಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ವಿಶೇಷ ತಂಡವನ್ನು (ಎಸ್‌ಐಟಿ) ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ (720ಕ್ಕೆ 720) ಸಿಕ್ಕಿದೆ, ಈ ಪೈಕಿ ಎಂಟು ಮಂದಿ ವಿದ್ಯಾರ್ಥಿಗಳು ಒಂದೇ ಕೇಂದ್ರಕ್ಕೆ ಸೇರಿದವರು. ಇದು ಪರೀಕ್ಷೆ ನಡೆಸಿದ ವಿಧಾನದ ಬಗ್ಗೆ ಅನುಮಾನ ಮೂಡಿಸುವಂತಿದೆ ಎಂದು ವಿವರಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಕೃಪಾಂಕ ನೀಡಿರುವುದು ಕೆಲವು ವಿದ್ಯಾರ್ಥಿಗಳಿಗೆ ಹಿಂಬಾಗಿಲ ಪ್ರವೇಶ ನೀಡಲು ನಡೆಸಿದ ದುರುದ್ದೇಶದ ಕೆಲಸ ಎಂದು ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT