ನವದೆಹಲಿ: ಜನವರಿ 26 ಗಣರಾಜ್ಯೋತ್ಸವ ದಿನದಂದು ಭಾರತದ ತ್ರಿವರ್ಣ ಪತಾಕೆಗೆ ಆದ ಅವಮಾನದಿಂದ ಇಡೀ ದೇಶವೇ ಆಘಾತ ಹಾಗೂ ನೋವಿಗೊಳಗಾಗಿದೆ ಎಂದು 2021ನೇ ಸಾಲಿನ ಮೊದಲ 'ಮನ್ ಕಿ ಬಾತ್' ರೆಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ನರೇಂದ್ರ ಮೋದಿ 'ಮನ್ ಕಿ ಬಾತ್' ಭಾಷಣದಮುಖ್ಯಾಂಶಗಳು:

ತ್ರಿವರ್ಣ ಧ್ವಜಕ್ಕೆ ಆದ ಅಗೌರವದಿಂದದೇಶಕ್ಕೆನೋವಾಗಿದೆ:
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆಸಿದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರು ಕೆಂಪುಕೋಟೆಯಲ್ಲಿ ಧಾರ್ಮಿಕ ಹಾಗೂ ರೈತ ಸಂಘಟನೆಗಳ ಧ್ವಜವನ್ನು ಹಾರಿಸಿದ್ದರು.

ಈ ಬಗ್ಗೆ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ತ್ರಿವರ್ಣ ಪತಾಕೆಗೆ ಆದ ಅಗೌರವದಿಂದ ಇಡೀ ದೇಶವು ನೋವು ಹಾಗೂ ಆಘಾತಕ್ಕೊಳಗಾಗಿದೆ ಎಂದು ಹೇಳಿದರು.

ಭಾರತದ ಐತಿಹಾಸಿಕ ಗೆಲುವು:
ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಸೋತರೂ ಅದ್ಭುತವಾಗಿ ಪುಟಿದೆದ್ದು ಸರಣಿಯನ್ನು ವಶಪಡಿಸಿದೆ ಎಂದು ಮೋದಿ ಉಲ್ಲೇಖಿಸಿದರು. ಇದು ಭಾರತ ತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕಿದ ಫಲವಾಗಿದ್ದು, ಎಲ್ಲರಿಗೂ ಸ್ಫೂರ್ತಿಯೆನಿಸಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ವೀರರಿಗೆ ಗೌರವ:
ದೇಶ ಈಗ 75ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಿದ್ದು, ನಿಮ್ಮ ಬರಹಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗಲಿರುವ ನೈಜ ಗೌರವವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್‌ನಲ್ಲಿ ತಿಳಿಸಿದರು.

ನಾನು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪುಸ್ತಕ ಬರೆಯಲು ದೇಶವಾಸಿಗಳನ್ನು ವಿಶೇಷವಾಗಿಯೂ ಯುವ ಸ್ನೇಹಿತರಿಗೆ ಕರೆ ನೀಡಲು ಬಯಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ತ್ರಿವರ್ಣ ಧ್ವಜಕ್ಕೆ ಅಗೌರವ ನೋವಿನ ಸಂಗತಿ–ಮೋದಿ

ಮಹಿಳಾ ಪೈಲಟ್‌ಗಳ ಸಾಧನೆ ಮೆಚ್ಚಿದ ಮೋದಿ:
ಕೆಲವು ದಿನಗಳ ಹಿಂದೆ ಭಾರತೀಯ ಮಹಿಳಾ ಪೈಲಟ್‌ಗಳು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ನೇರ ವಿಮಾನ ಹಾರಾಟ ನಡೆಸಿದರು. ಸುಮಾರು 10,000 ಕಿಲೋಮೀಟರ್ ದೂರವನ್ನು ಕ್ರಮಿಸಿದ ಈ ವಿಮಾನವು 225 ಜನರನ್ನು ಭಾರತಕ್ಕೆ ಕರೆ ತಂದಿದೆ. ಯಾವುದೇ ಕ್ಷೇತ್ರವಾಗಲಿ ದೇಶದ ಮಹಿಳೆಯರ ಪಾಲುದಾರಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದರು.

ಜಗತ್ತಿನ ಅತಿ ದೊಡ್ಡ ಕೋವಿಡ್-19 ಲಸಿಕೆ ಅಭಿಯಾನ:
ಭಾರತವು ಜನವರಿ 16ರಂದು ಆರಂಭಿಸಿರುವ ಜಗತ್ತಿನ ಅತಿ ದೊಡ್ಡ ಕೋವಿಡ್-19 ಲಸಿಕೆ ಅಭಿಯಾನವನ್ನು ಕೊಂಡಾಡಲು ಪ್ರಧಾನಿ ನರೇಂದ್ರ ಮೋದಿ ಮರೆಯಲಿಲ್ಲ.

ನಾವು ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನವನ್ನಷ್ಟೇ ನಡೆಸುತ್ತಿಲ್ಲ. ದೇಶದ ನಾಗರಿಕರಿಗೂ ವೇಗವಾಗಿ ಲಸಿಕೆ ಹಾಕಿಸುವಲ್ಲಿಯೂ ನಾವು ಮುಂದಿದ್ದೇವೆ ಎಂದು ತಿಳಿಸಿದರು.

ಮೇಡ್ ಇನ್ ಇಂಡಿಯಾ ಕೋವಿಡ್-19 ಲಸಿಕೆಯು ಸ್ವಾವಲಂಬಿ ಭಾರತದ ಸಂಕೇತವಷ್ಟೇ ಅಲ್ಲ, ಅದು ನಮ್ಮ ಸ್ವಾಭಿಮಾನದ ಸಂಕೇತವಾಗಿದೆ ಎಂದು ತಿಳಿಸಿದರು.

ಭಾರತವು ಇತರೆ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆ ಹಂಚಲು ಸಮರ್ಥವಾಗಿದೆ ಎಂಬದನ್ನು ಸಾಬೀತುಪಡಿಸಿದೆ. ಯಾಕೆಂದೆರ ಔಷಧಿ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿದೆ ಎಂದು ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಮೋದಿ ತಿಳಿಸಿದರು.

ನಾವೀನ್ಯತೆಯ ಶಕ್ತಿ:
ತರಕಾರಿ ಮಂಡಿಯಲ್ಲಿ ಆರೋಗ್ಯಕರವಲ್ಲವಲ್ಲದ ಪರಿಸ್ಥಿತಿಯಿಂದಾಗಿ ತರಕಾರಿಗಳು ಕೊಳೆತು ಹೋಗುತ್ತಿದೆ. ಆದರೆ ಹೈದರಾಬಾದ್‌ನ ಬೋವೆನ್‌ಪಲ್ಲಿಯಲ್ಲಿ ತರಕಾರಿ ಮಂಡಿಯ ವ್ಯಾಪಾರಿಗಳು ತ್ಯಾಜ್ಯ ತರಕಾರಿಗಳಿಂದ ವಿದ್ಯುತ್ ಉತ್ಪಾದಿಸುವ ಮೂಲಕ ನಾವೀನ್ಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಇಲ್ಲಿ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲಾಗಿದೆ. ಕಸವನ್ನು ಚಿನ್ನವಾಗಿ ಪರಿವರ್ತಿಸುವ ಪ್ರಯಾಣವಿದು. ಪ್ರತಿದಿನ ಸುಮಾರು 10 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. 30 ಕೆ.ಜಿ ಜೈವಿಕ ಇಂಧನವನ್ನು ಹೊರತುಪಡಿಸಿ ಪ್ರತಿದಿನಿ 500 ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.

ಇದನ್ನೂ ಓದಿ:ಕೃಷಿ ಕಾಯ್ದೆಗಳ ಅಮಾನತು ಪ್ರಸ್ತಾವನೆಗೆ ಸರ್ಕಾರ ಬದ್ಧ: ಪ್ರಧಾನಿ ಮೋದಿ

ರಸ್ತೆ ಸುರಕ್ಷತಾ ಮಾಸ:
ಭಾರತವು ಜನವರಿ 18ರಿಂದ ಫೆಬ್ರವರಿ 17ರ ವರೆಗೆ ರಸ್ತೆ ಸುರಕ್ಷತಾ ತಿಂಗಳನ್ನು ಆಚರಿಸುತ್ತಿದೆ. ರಸ್ತೆ ಅಪಘಾತ ಆತಂಕಕಾರಿ ವಿಷಯವಾಗಿದೆ. ರಸ್ತೆ ನಿರ್ಮಾಣದಲ್ಲಿ ಬಿಆರ್‌ಎ 'ಇದು ಹೆದ್ದಾರಿ ರನ್‌ವೇ ಅಲ್ಲ' ಎಂಬ ನಾವೀನ್ಯ ಘೋಷಣೆಯನ್ನು ಹೊಂದಿದೆ. ಈ ಅಭಿಯಾನದಲ್ಲಿ ಬಳಕೆ ಮಾಡಲು ಇಂತಹ ಪ್ರಭಾವಿ ಘೋಷಣೆಯನ್ನು ನೀವು ಕೂಡಾ ಕಳುಹಿಸಬಹುದಾಗಿದೆ.

ಕೃಷಿಯನ್ನು ಆಧುನೀಕರಿಸಲು ಸರ್ಕಾರ ಬದ್ಧ:
ಕೃಷಿಯನ್ನು ಆಧುನೀಕರಿಸಲು ಮತ್ತು ಆ ದಿಕ್ಕಿನತ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸದಾ ಬದ್ಧವಾಗಿದೆ. ಸರ್ಕಾರದ ಇಂತಹ ಪ್ರಯತ್ನಗಳು ಭವಿಷ್ಯದಲ್ಲಿಯೂ ಮುಂದುವರಿಯಲಿದೆ ಎಂದು ತಿಳಿಸಿದರು.

ಕೇರಳದ ವ್ಯಕ್ತಿಗೆ ಮೋದಿ ಶ್ಲಾಘನೆ:
ಕೇರಳದ ಕೊಟ್ಟಾಯಂನ ಹಿರಿಯ ನಾಗರಿಕ ಎನ್.ಎಸ್. ರಾಜಪ್ಪನ್ ಅವರಿಗೆ ಪಾರ್ಶ್ವವಾಯು ಕಾರಣ ನಡೆಯಲೂ ಸಾಧ್ಯವಾಗುತ್ತಿಲ್ಲ. ಆದರೆ ಸ್ವಚ್ಛತೆಯ ಬಗ್ಗೆ ಅಪಾರ ಬದ್ಧತೆಯನ್ನು ಪ್ರದರ್ಶಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ವಿಶೇಷ ಚೇತನದ ಹೊರತಾಗಿಯೂ ಕಳೆದ ಹಲವಾರು ವರ್ಷಗಿಳಿಂದ ವೆಂಬನಾಡ್ ಸರೋವರದಲ್ಲಿರುವ ದೋಣಿಯ ಮೂಲಕ ಪ್ಲಾಸ್ಟಿಕ್ ಬಾಟಲಿಗಳನ್ನು ತೆರವುಗೊಳಿಸುತ್ತಿದ್ದಾರೆ. ಆದರ ಆದರ್ಶಗಳು ಎಷ್ಟು ಮೇಲರಿಮೆಯನ್ನು ಹೊಂದಿದೆ ನೋಡಿ ಎಂದು ವಿಶೇಷವಾಗಿ ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಸಂಪೂರ್ಣ ವಿಡಿಯೊ ಇಲ್ಲಿ ವೀಕ್ಷಿಸಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.