ದಾಸಪುರ/ದೆಬ್ರಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿಯವರ ಬೆಳೆಯುತ್ತಿರುವ ಗಡ್ಡವು ದೇಶದ ಆರ್ಥಿಕತೆಯ ಸ್ಥಿತಿಗೆ ವಿರುದ್ಧವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪಹಾಸ್ಯ ಮಾಡಿದ್ದಾರೆ.

ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ದೇಶದ 'ಅತಿದೊಡ್ಡ ವಂಚನೆ ಪಕ್ಷ'. ಏಕೆಂದರೆ, ಬಿಜೆಪಿ 'ಇತರ ರಾಜ್ಯಗಳ ಗೂಂಡಾಗಳನ್ನು ಬಳಸಿಕೊಂಡು ಮತಗಳನ್ನು ಲೂಟಿ ಮಾಡುವ ಯೋಜನೆಯನ್ನು ಹೊಂದಿದೆ' ಮತ್ತು ರಾಜ್ಯದ ಟಿಎಂಸಿ ಕಾರ್ಯಕರ್ತರು ಇದರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಭಾರತದ ಆರ್ಥಿಕತೆ ಕುಸಿತದತ್ತ ಸಾಗಿದೆ. ಇಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗುತ್ತಿಲ್ಲ. ನರೇಂದ್ರ ಮೋದಿಜಿಯ ಗಡ್ಡವನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಬೆಳವಣಿಗೆಯಾಗುತ್ತಿಲ್ಲ. ಕೆಲವೊಮ್ಮೆ ಅವರು ರವೀಂದ್ರನಾಥ ಟ್ಯಾಗೋರ್ ಅವರಂತೆ ಉಡುಪನ್ನು ಧರಿಸುತ್ತಾರೆ ಮತ್ತು ಆ ಸಮಯದಲ್ಲಿ ಮಹಾತ್ಮ ಗಾಂಧಿಯನ್ನು ಇಷ್ಟಪಡುತ್ತಾರೆ. ಇಡೀ ದೇಶವನ್ನು ಮಾರಾಟ ಮಾಡಿ ನರೇಂದ್ರ ಮೋದಿಯವರ ಹೆಸರಿಡುವ ದಿನ ದೂರವಿಲ್ಲ... ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ಧರ್ಮ, ಸಂಸ್ಕೃತಿ ಮತ್ತು ಭಾಷೆ ಆಧಾರದಲ್ಲಿ ಸಮಾಜದ ವಿಭಜನೆ: ಮನಮೋಹನ್ ಸಿಂಗ್

'ನಾವೆಲ್ಲರೂ (ವಿರೋಧ ಪಕ್ಷಗಳು) ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ವಿಚಾರದಲ್ಲಿ ನಿರತರಾಗಿರುವುದರಿಂದಾಗಿ ಬಿಜೆಪಿ ಸರ್ಕಾರವು ದೆಹಲಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ ಅಧಿಕಾರವನ್ನು ಮೊಟಕುಗೊಳಿಸಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡುವ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಇದು ನಾಚಿಕೆಗೇಡಿನ ಸಂಗತಿ' ಎಂದು ಕಿಡಿಕಾರಿದರು.

ಮಾರ್ಚ್ 27 ರಿಂದ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲಿದೆ.

2019ರ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಬರುತ್ತಿದ್ದ ಬಾಂಗ್ಲಾದೇಶದ ನಟ ಫಿರ್ದೌಸ್ ಅವರ ವೀಸಾ ರದ್ದತಿ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರ ಪ್ರಚಾರಕ್ಕಾಗಿ ತೆರಳಿದ ಮೋದಿಯವರಿಗೆ ಏಕೆ ಇದನ್ನು ಮಾಡಿಲ್ಲ ಎಂದು ಪ್ರಶ್ನಿಸಿದರು.

'ವಿದೇಶದಲ್ಲಿ ಪ್ರಚಾರಕ್ಕಾಗಿ ಫಿರ್ದೌಸ್ ಅವರ ವೀಸಾವನ್ನು ರದ್ದುಗೊಳಿಸಬಹುದಾದರೆ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರಕ್ಕಾಗಿ ಮೋದಿಜಿಯ ವೀಸಾವನ್ನು ಸಹ ರದ್ದುಗೊಳಿಸಬೇಕಲ್ಲವೇ. 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂಬ ಘೋಷಣೆಯನ್ನು ನೀವು ಮರೆತಿದ್ದೀರಾ' ಎಂದು ಹೇಳಿದರು.

ಇದನ್ನೂ ಓದಿ:ಲವ್ ಮತ್ತು ಜಮೀನು ಜಿಹಾದ್ ಪಿಡುಗನ್ನು ತಡೆಯಲು ಕಾನೂನು ಜಾರಿ: ಅಮಿತ್ ಶಾ

ಜನರನ್ನು ಹೆದರಿಸಲು ಬಿಜೆಪಿ ಗೂಂಡಾಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ದೇಶದ ಅತಿದೊಡ್ಡ ವಂಚನೆ ಮತ್ತು ಜಂಜಲ್ (ಕಸ) ಪಕ್ಷವಾಗಿದೆ. ಚುನಾವಣೆಯನ್ನು ಗೆಲ್ಲಲು ಅದು ಯಾವ ಮಟ್ಟಕ್ಕಾದರೂ ಇಳಿಯುತ್ತದೆ. ಮತದಾನ ಮುಗಿದ ನಂತರವೂ ನಿಮ್ಮ ಕರ್ತವ್ಯ ಮುಗಿಯುವುದಿಲ್ಲ. ನೀವು ಇವಿಎಂಗಳನ್ನು ಕಾಪಾಡಬೇಕು ಎಂದು ದಾನಪುರದಲ್ಲಿ ನಡೆದ ರ್ಯಾಲಿಯಲ್ಲಿ ಟಿಎಂಸಿ ಕಾರ್ಮಿಕರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.