ತಿರುವನಂತಪುರ: ಕೇರಳ ಕಲಾಮಂಡಲಂ ವಿಶ್ವವಿದ್ಯಾಲಯದಲ್ಲಿನ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಅಲ್ಲಿನ ಕುಲಪತಿ, ಪ್ರಸಿದ್ಧ ಕಲಾವಿದೆ ಮಲ್ಲಿಕಾ ಸಾರಭಾಯಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಸಿಪಿಎಂ ಸರ್ಕಾರವನ್ನು ಮುಜುಗರಕ್ಕೀಡುಮಾಡಿದೆ.

‘ಕಲಾಮಂಡಲಂನಲ್ಲಿರುವ ಬಹುತೇಕ ನೌಕರರಿಗೆ ಪತ್ರ ಬರೆಯಲು ಅಥವಾ ಲೆಕ್ಕಪತ್ರಗಳನ್ನು ನಿರ್ವಹಿಸಲು ಕೂಡಾ ತಿಳಿದಿಲ್ಲ. ಅವರಿಗೆ ಸರಿಯಾದ ತರಬೇತಿಯನ್ನು ನೀಡಿಲ್ಲ. ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ನಾನು ವಿರೋಧಿಸಲ್ಲ, ಆದರೆ ಅರ್ಹ ವ್ಯಕ್ತಿಗಳ ನೇಮಕಾತಿಯನ್ನು ಬಯಸುತ್ತೇನೆ’ ಎಂದು ಮಲ್ಲಿಕಾ ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿನ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರನ್ನು 2022ರಲ್ಲಿ ಕುಲಪತಿ ಹುದ್ದೆಯಿಂದ ಕೈಬಿಟ್ಟು, ಸಾರಾಭಾಯಿ ಅವರನ್ನು ನೇಮಿಸಲಾಗಿತ್ತು.

ಈ ಹಿಂದೆಯೂ ಸರ್ಕಾರದ ವಿರುದ್ಧ ಮಾತನಾಡಿದ್ದ ಮಲ್ಲಿಕಾ ಅವರು ಆಶಾ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಗೂ ಬೆಂಬಲ ನೀಡಿದ್ದರು. ‘ಕುಲಪತಿಯಾಗಿರುವ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲಾಗುತ್ತಿದೆ’ ಎಂದೂ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.