ಬೆಂಗಳೂರು: ಪಂಜಾಬ್‌ನ 2017ರ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷವು, ಈ ಬಾರಿ ಚುನಾವಣೆಯಲ್ಲಿ 19–33 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಪ್ರಕಟಿಸಿವೆ. ಕಳೆದ ಬಾರಿ ಕೇವಲ 3 ಸ್ಥಾನಗಳಲ್ಲಿ ನಗೆ ಬೀರಿದ್ದ ಬಿಜೆಪಿಯು ಈ ಬಾರಿಯೂ ಹಿಂದುಳಿಯಲಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಅತಿ ಹೆಚ್ಚು ಸ್ಥಾನಗಳನ್ನು (56–100) ಪಡೆಯುವುದಾಗಿ ಪ್ರಕಟಿಸಿವೆ.

ಕಳೆದ ಚುನಾವಣೆಯಲ್ಲಿ 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ, ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ವ್ಯಕ್ತಪಡಿಸಿವೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಇಂಡಿಯಾ ಟುಡೆ–ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ಎಎಪಿ 83 ಸ್ಥಾನಗಳು ಹಾಗೂ ಕಾಂಗ್ರೆಸ್ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

ಎಎಪಿ ಸ್ಥಾನಗಳಿಸುವುದರಲ್ಲಿ ಎಡವಿದರೆ, ಸರ್ಕಾರ ರಚನೆಯಲ್ಲಿ ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಪ್ರಮುಖ ಪಾತ್ರವಹಿಸುವ ಸಾಧ್ಯತೆಯನ್ನು ಬಹುತೇಕ ಸಮೀಕ್ಷೆಗಳು ತೆರೆದಿಟ್ಟಿವೆ.

ಟುಡೇಸ್ ಚಾಣಕ್ಯ ಪ್ರಕಾರ, ಎಎಪಿ 100 ಸ್ಥಾನಗಳನ್ನು ಪಡೆಯಲಿದೆ.

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಪರವಾಗಿ ಶೇಕಡ 37ರಷ್ಟು ಮತದಾರರು ಒಲವು ತೋರಿದ್ದರೆ, ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಶೇಕಡ 27ರಷ್ಟು ಮತದಾರರ ಬೆಂಬಲ ಸಿಕ್ಕಿದೆ. ಶೇಕಡ 19ರಷ್ಟು ಮತದಾರರು ಸುಖ್ಬಿರ್ ಸಿಂಗ್ ಬಾದಲ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಉತ್ತಮ ಎಂದಿದ್ದಾರೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಭಗವಂತ್ ಮಾನ್ ಮುಖ್ಯಮಂತ್ರಿಯಾಗುವ ಬಗ್ಗೆ ಮತದಾರರ ಒಲವಿದೆ.

ಇದನ್ನೂ ಓದಿ–Uttrakhand Exit Poll 2022| ಉತ್ತರಾಖಂಡದಲ್ಲಿ ಬಿಜೆಪಿ - ಕಾಂಗ್ರೆಸ್ ಪೈಪೋಟಿ

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ನಡೆದಿರುವ ಮತದಾನ ಪ್ರಕ್ರಿಯೆಯು ಸೋಮವಾರ ಕೊನೆಗೊಂಡಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಮತಗಟ್ಟೆ ಸಮೀಕ್ಷೆಗಳು ಹೊರ ಬಂದಿವೆ.

ಫೆಬ್ರುವರಿ 10ರ ಬೆಳಿಗ್ಗೆ 7ರಿಂದ, ಮಾರ್ಚ್ 7 ರ ಸಂಜೆ 6.30 ರ ನಡುವಿನ ಅವಧಿಯಲ್ಲಿ ಮತಗಟ್ಟೆ ಸಮೀಕ್ಷೆಯನ್ನು ನಡೆಸುವ ಮತ್ತು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟಿಸುವ ಅಥವಾ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗವು ನಿಷೇಧಿಸಿತ್ತು. ಇದೀಗ ಹಲವು ಮಾಧ್ಯಮಗಳು, ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿವೆ.

ಪಂಜಾಬ್: 2017ರ ವಿಧಾನಸಭಾ ಚುನಾವಣೆ ಫಲಿತಾಂಶ

ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು

ಕಾಂಗ್ರೆಸ್– 77
ಎಎಪಿ– 20
ಲೋಕ ಇನ್‌ಸಾಫ್ ಪಾರ್ಟಿ– 02
ಶಿರೋಮಣಿ ಅಕಾಲಿ ದಳ (ಎಸ್‌ಎಡಿ)– 15
ಬಿಜೆಪಿ– 3

ಪಂಜಾಬ್: 2022ರ ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ

ಇಂಡಿಯಾ ಟುಡೆ

ಬಿಜೆಪಿ: 1–4
ಕಾಂಗ್ರೆಸ್: 19–31
ಎಎಪಿ: 76–90
ಎಸ್‌ಎಡಿ: 7–11

ಟುಡೇಸ್ ಚಾಣಕ್ಯ

ಬಿಜೆಪಿ: 01
ಕಾಂಗ್ರೆಸ್: 10
ಎಎಪಿ: 100
ಎಸ್‌ಎಡಿ: 6

ಸಿ–ವೋಟರ್

ಬಿಜೆಪಿ: 7–13
ಕಾಂಗ್ರೆಸ್: 22–28
ಎಎಪಿ: 51–61
ಎಸ್‌ಎಡಿ: 20–26

ಇದನ್ನೂ ಓದಿ–LIVE| Exit Poll 2022: ಪಂಚ ರಾಜ್ಯಗಳಲ್ಲಿ ಯಾರಿಗೆಷ್ಟು ಸ್ಥಾನ, ಯಾರಿಗೆ ಅಧಿಕಾರ?

ಇಟಿಜಿ ರಿಸರ್ಚ್

ಬಿಜೆಪಿ: 3–7
ಕಾಂಗ್ರೆಸ್: 27–33
ಎಎಪಿ: 70–75
ಎಸ್‌ಎಡಿ: 7–13

ನ್ಯೂಸ್‌ಎಕ್ಸ್–ಪೋಲ್‌ಸ್ಟರ್

ಬಿಜೆಪಿ: 1–6
ಕಾಂಗ್ರೆಸ್: 24–29
ಎಎಪಿ: 56–61
ಎಸ್‌ಎಡಿ: 22–26

ರಿಪಬ್ಲಿಕ್ ಟಿ.ವಿ

ಬಿಜೆಪಿ 1–3
ಕಾಂಗ್ರೆಸ್: 23–31
ಎಎಪಿ: 62–70
ಎಸ್‌ಎಡಿ: 16–24

ಇದನ್ನೂ ಓದಿ–Uttar Pradesh Exit Poll 2022: ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ

ಟಿವಿ9–ಭಾರತವರ್ಷ–ಪೋಲ್‌ಸ್ಟರ್

ಬಿಜೆಪಿ: 1–6
ಕಾಂಗ್ರೆಸ್: 24–29
ಎಎಪಿ: 56–61
ಎಸ್‌ಎಡಿ: 22–26

ಇದನ್ನೂ ಓದಿ–Goa Exit Poll 2022: ಗೋವಾದಲ್ಲಿ ಮತ್ತೆ ಅತಂತ್ರ ಫಲಿತಾಂಶ ನಿರೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.