ಶಂಭು: ಹರಿಯಾಣ ಭದ್ರತಾ ಪಡೆಗಳು ಪಂಜಾಬ್ ಗಡಿಯಲ್ಲಿ ಅಶ್ರುವಾಯು ಶೆಲ್ ಸಿಡಿಸಿದ ಪರಿಣಾಮ ಪ್ರತಿಭಟನಾನಿರತ ರೈತರು ದೆಹಲಿಗೆ ಕೈಗೊಂಡಿದ್ದ ಪಾದಯಾತ್ರೆಯನ್ನು ಶನಿವಾರ ಸ್ಥಗಿತಗೊಳಿಸಿದ್ದಾರೆ.

ಅಶ್ರುವಾಯು ಸಿಡಿಸಿದ ಪರಿಣಾಮ 17-18 ರೈತರು ಗಾಯಗೊಂಡಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಜಾಥಾವನ್ನು ಸ್ಥಗಿತಗೊಳಿಸಲು ಎರಡೂ ರೈತ ಸಂಘಟನೆಗಳು ನಿರ್ಧರಿಸಿವೆ ಎಂದು ರೈತ ಮುಖಂಡ ಸರವಣ ಸಿಂಗ್ ಪಂಢೇರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಭದ್ರತಾ ಪಡೆಗಳು ರಬ್ಬರ್ ಬುಲೆಟ್ಗಳನ್ನೂ ಹಾರಿಸಿದ್ದು, ರೈತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರೈತ ಮುಖಂಡ ಮಂಜಿತ್ ಸಿಂಗ್ ರೈ ತಿಳಿಸಿದ್ದಾರೆ.

ಸಭೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರನ್ನು ಚದುರಿಸಲು ರಾಸಾಯನಿಕಯುಕ್ತ ನೀರನ್ನು ಬಳಸಲಾಗಿದೆ ಮತ್ತು ಈ ಬಾರಿ ಹೆಚ್ಚು ಅಶ್ರುವಾಯುವನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.

ಅಂಬಾಲ ಕಂಟೋನ್ಮೆಂಟ್ನ ಡಿವೈಎಸ್ಪಿ ರಜತ್ ಗುಲಿಯಾ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

‘ಸಂವಿಧಾನ ಅಂಗೀಕಾರ ಆಗಿ 75 ವರ್ಷಗಳು ಸಂದಿದೆ. ಈ ಸಂದರ್ಭದಲ್ಲಿ ಸಂವಿಧಾನ ಕುರಿತು ಸಂಸತ್ನಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಸಂಸತ್ನಲ್ಲಿ ರೈತರ ಬಗ್ಗೆ ಯಾರೊಬ್ಬರೂ ದನಿ ಎತ್ತುತ್ತಿಲ್ಲ. ನಮ್ಮ ಪ್ರತಿಭಟನೆ ತಡೆಗೆ ಯಾವ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ? 101 ರೈತರ ಜಾಥಾದಿಂದ ದೇಶದ ಯಾವ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ ಎಂಬುದನ್ನು ಅರಿಯಲು ನಾವು ಬಯಸುತ್ತೇವೆ’ ಪಂಢೇರ್ ತಿಳಿಸಿದ್ದಾರೆ.

ರೈತರು ಶನಿವಾರ ಮಧ್ಯಾಹ್ನ 12ಕ್ಕೆ ಪಾದಯಾತ್ರೆ ಮರುಪ್ರಾರಂಭಿಸಿದ ಬಳಿಕ ಪಂಜಾಬ್–ಹರಿಯಾಣ ಗಡಿಯಲ್ಲಿ ಹರಿಯಾಣ ಭದ್ರತಾ ಪಡೆಗಳು ತಡೆದವು. ಎಂಎಸ್ಪಿಗೆ ಕಾನೂನು ಭದ್ರತೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.