ಗುವಾಹಟಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು (ಶುಕ್ರವಾರ) ಸೋನಾಪುರದಲ್ಲಿರುವ ಗಾಯಕ ಜುಬೀನ್ ಗರ್ಗ್ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಇದೇ ವೇಳೆ ರಾಹುಲ್ ಗಾಂಧಿ ಅವರು ಸಾಂಪ್ರದಾಯಿಕ ಅಸ್ಸಾಮೀಸ್ ಸ್ಕಾರ್ಫ್ ಮತ್ತು ಮಾಲೆಯನ್ನು ಅರ್ಪಿಸಿದರು. ಈ ವೇಳೆ ಅಲ್ಲಿ ನೆರೆದಿದ್ದವರು ಜುಬೀನ್ ಸಾವಿಗೆ ನ್ಯಾಯ ದೊರೆಯಬೇಕು ಎಂಬ ಘೋಷಣೆಗಳನ್ನು ಕೂಗಿದರು.
.ಆರ್ಎಸ್ಎಸ್ ನಿಷೇಧ ಸಂವಿಧಾನಕ್ಕೆ ವಿರುದ್ಧ: ನಿವೃತ್ತ ನ್ಯಾ. ಸಂತೋಷ ಹೆಗ್ಡೆ.ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ.
ರಾಹುಲ್ ಅವರು ಸಮಾಧಿ ಬಳಿ ಕುಳಿತು, ಪ್ರಾರ್ಥನೆಯಲ್ಲಿ ಭಾಗಿಯಾದರು.

ಈ ವೇಳೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅಸ್ಸಾಂ ಉಸ್ತುವಾರಿ ಜಿತೇಂದ್ರ ಸಿಂಗ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಮತ್ತು ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು.

ಜುಬೀನ್ ಅವರ ದಿಢೀರ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
.PHOTOS: ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಎರಡನೇ ಮದುವೆಯಾದ ನಟಿ ಅರ್ಚನಾ ಕವಿ.ನಿತೀಶ್ರನ್ನು ಭೇಟಿ ಮಾಡಿದ ಶಾ: ಬಿಹಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ.
ರಾಹುಲ್ ಗಾಂಧಿ ಅವರ ಭೇಟಿ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ‘ಘಟನೆ ನಡೆದ 28 ದಿನಗಳ ನಂತರ ಅವರು ಬರುತ್ತಿದ್ದಾರೆ. ಆದರೂ ಸ್ವಾಗತಿಸುವೆ. ಜುಬೀನ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಅಥವಾ ಪ್ರಿಯಾಂಕ ಅವರಂತಹ ಕಾಂಗ್ರೆಸ್ನ ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ಬರಲಿಲ್ಲ’ ಎಂದು ಟೀಕಿಸಿದರು.
.ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ: ಮದ್ರಾಸ್ ಹೈಕೋರ್ಟ್ಗೆ ಚುನಾವಣಾ ಆಯೋಗ.Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ.ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ ಎಂದು ಸಿಎಂಗೆ ಪತ್ರ ಬರೆದ ಯತ್ನಾಳ.ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೆದಾರ ಮನೆ ಸೇರಿದಂತೆ ಎರಡು ಕಡೆ ಎಸ್ಐಟಿ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.