ಮಲಯಾಳಂ ನಟಿ ಅರ್ಚನಾ ಕವಿ ಮೊದಲ ಪತಿಗೆ ವಿಚ್ಛೇದನ ನೀಡಿ 4 ವರ್ಷಗಳ ಬಳಿಕ ಮತ್ತೊಂದು ಮದುವೆಯಾಗಿದ್ದಾರೆ. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾ ಕವಿ ಅವರು ರಿಕ್ ವರ್ಗೀಸ್ ಎಂಬುವವರ ಜೊತೆಗೆ ಹಸೆಮಣೆ ಏರಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ಕುಟುಂಬಸ್ಥರ ಒಪ್ಪಿಗೆ ಮೇರೆಗೆ ರಿಕ್ ವರ್ಗೀಸ್ ಜೊತೆಗೆ ಎರಡನೇ ಮದುವೆಯಾದ ಫೋಟೊಗಳನ್ನು ನಟಿ ಅರ್ಚನಾ ಕವಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ನೀಲಾತಮಾರ ಇವರ ಮೊದಲ ಸಿನಿಮಾವಾಗಿದ್ದು, ‘ಬೆಸ್ಟ್ ಆಫ್ ಲಕ್’, ‘ಸಾಲ್ಟ್ ಆಂಡ್ ಪೆಪ್ಪರ್’, ‘ಡೇ ನೈಟ್ ಗೇಮ್’, ‘ಬ್ಯಾಂಗಲ್ಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಮಲಯಾಳಂನಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಇನ್ನು, ನಟಿ ಅರ್ಚನಾ ಕವಿ ಅವರು ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಟಿ ಅರ್ಚನಾ ಕವಿ ಹಾಗೂ ರಿಕ್ ವರ್ಗೀಸ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾಗಿದ್ದರಂತೆ. ಆರಂಭದಲ್ಲಿ ಈ ಇಬ್ಬರು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಯಾವುದೋ ಶಕ್ತಿ ನಮ್ಮನ್ನು ಒಟ್ಟಿಗೆ ಸೇರುವಂತೆ ಮಾಡಿದೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಈ ವಿಡಿಯೊವನ್ನು ನಿರೂಪಕಿ ಧನ್ಯಾ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನಟಿ ಅರ್ಚನಾ ಹಂಚಿಕೊಂಡ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನಟಿ ಅರ್ಚನಾ ಕವಿ ಅವರು 2016ರಲ್ಲಿ ಹಾಸ್ಯನಟ ಮತ್ತು ಯೂಟ್ಯೂಬರ್ ಅಬಿಶ್ ಮ್ಯಾಥ್ಯೂ ಅವರನ್ನು ಮದುವೆುಯಾಗಿದ್ದರು. ಆದರೆ 2021ರಲ್ಲಿ ಈ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.