ಜೈಪುರ: ಬಾಲಕನನ್ನು ಅಪಹರಿಸಿ, ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದ, 30 ವರ್ಷದ ಮಹಿಳೆಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಸಜೆ ವಿಧಿಸಿ ಆದೇಶಿಸಿದೆ.

2023ರಲ್ಲಿ ಈ ಕೃತ್ಯ ನಡೆದಿತ್ತು. ಪ್ರಕರಣದ ತೀರ್ಪು ಪ್ರಕಟಿಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಸಲೀಮ್ ಬಾದರ್ ಅವರು, ಅಪರಾಧಿ ಲಾಲಿಬಾಯಿಗೆ
₹ 45 ಸಾವಿರ ದಂಡವನ್ನು ವಿಧಿಸಿದರು.

ಬಾಲಕನ ಅಪಹರಣ, ಲೈಂಗಿಕ ದೌರ್ಜನ್ಯ ಆರೋಪದಡಿ ಮಹಿಳೆಯ ವಿರುದ್ಧ ಬಾಲ ನ್ಯಾಯ ಮಂಡಳಿ ಆದೇಶದಂತೆ 2023ರ ನವೆಂಬರ್ 7ರಂದು ಪ್ರಕರಣ ದಾಖಲಾಗಿತ್ತು.

‘16 ವರ್ಷದ ಮಗನನ್ನು ಮಹಿಳೆ ಆಮಿಷವೊಡ್ಡಿ ಜೈಪುರಕ್ಕೆ ಕರೆದೊಯ್ದಿದ್ದು, ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ, ಮಗನಿಗೆ ಮದ್ಯ ಕುಡಿಯಲು ಪ್ರಚೋದಿಸಿದ್ದು, 6–7 ದಿನ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ’ ಎಂದು ಬಾಲಕನ ತಾಯಿ ದೂರು ನೀಡಿದ್ದರು.

ದೂರು ಆಧರಿಸಿ ಮಹಿಳೆಯನ್ನು ಬಂಧಿಸಿದ್ದು, ಬಳಿಕ ಜೈಲಿನಿಂದ ಬಿಡುಗಡೆ ಆಗಿದ್ದರು. ಈಗ ಅಪರಾಧ ಸಾಬೀತಾಗಿದ್ದು, ಕೋರ್ಟ್ ಶಿಕ್ಷೆ ವಿಧಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮುಕೇಶ್ ಜೋಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.