ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ | RSS ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನೌಕರರ ಮೇಲಿದ್ದ ನಿರ್ಬಂಧ ತೆರವು

Published : 24 ಆಗಸ್ಟ್ 2024, 9:58 IST
Last Updated : 24 ಆಗಸ್ಟ್ 2024, 9:58 IST
ಫಾಲೋ ಮಾಡಿ
Comments

ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳಲು ಇದ್ದ ನಿಷೇಧವನ್ನು ಬಿಜೆಪಿ  ಆಡಳಿತದ ರಾಜಸ್ಥಾನ ಸರ್ಕಾರ ಶನಿವಾರ ತೆರವುಗೊಳಿಸಿದೆ.

ಆ ಮೂಲಕ ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ 52 ವರ್ಷಗಳ ನಿಷೇಧವನ್ನು ರಾಜಸ್ಥಾನ ರದ್ದುಪಡಿಸಿದೆ.

ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, 1972 ಹಾಗೂ 1981ರ ಸೂಚನೆಗಳನ್ನು ಪುನರ್‌ ಪರಿಶೀಲಿಸಿರುವ ಅಲ್ಲಿನ ಸರ್ಕಾರ, ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ಆರ್‌ಎಸ್‌ಎಸ್‌ ಅನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಇದಕ್ಕೂ ಪೂರ್ವದಲ್ಲಿ ಆರ್‌ಎಸ್‌ಎಸ್‌ ಕುರಿತಾಗಿ ಇದೇ ಮಾದರಿಯ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ ಹಾಗೂ ಛತ್ತೀಸಗಢ ಸರ್ಕಾರಗಳು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರಿಗೆ ಇದ್ದ ನಿರ್ಬಂಧವನ್ನು ಈಗಾಗಲೇ ತೆಗೆದುಹಾಕಿವೆ.

1966ರ ನವೆಂಬರ್‌ನಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT