ಮುಂಬೈ: ಆಭರಣದ ಮಳಿಗೆಯೊಂದರಲ್ಲಿ ಅಪರಿಚಿತರು ಬರೋಬ್ಬರಿ ₹7 ಕೋಟಿ ಮೌಲ್ಯದ 6.5 ಕೆಜಿ ಚಿನ್ನಾಭರಣಗಳನ್ನು ದೋಚಿರುವ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಠಾಣೆ ರೈಲು ನಿಲ್ದಾಣದ ಬಳಿ ಇರುವ ಆಭರಣದ ಮಳಿಗೆಯೊಂದರಲ್ಲಿ ಈ ಘಟನೆ ನಡೆದಿದೆ.

‘ಕಳ್ಳರು ಮಳಿಗೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಮಳಿಗೆಯ ಮಾಲೀಕರು ಆಭರಣಗಳನ್ನು ಸೇಫ್ ಲಾಕರ್ಗಳಲ್ಲಿ ಇಡದೇ, ಹೊರಗಡೆಯೇ ಇಟ್ಟು ಹೋಗಿದ್ದಾರೆ. ಇದರ ಲಾಭ ಪಡೆದ ಕಳ್ಳರು ಕಡಿಮೆ ಸಮಯದಲ್ಲಿ ಆಭರಣಗಳನ್ನು ದೋಚಿದ್ದಾರೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಬೆಂಗಳೂರಲ್ಲೇ ಹೆಚ್ಚು; ಮೈಸೂರಿಗೆ 2ನೇ ಸ್ಥಾನ.Oscars 2025: ಆಸ್ಕರ್ ಪ್ರಶಸ್ತಿ ರೇಸ್ನಿಂದ ಭಾರತದ 'ಲಾಪತಾ ಲೇಡೀಸ್' ಹೊರಕ್ಕೆ.
‘ಸುರಕ್ಷತೆಯ ಲೋಪದಿಂದಾಗಿಯೇ ದರೋಡೆಕೋರರಿಗೆ ಅನುಕೂಲವಾಯಿತು‘ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ವಿಧಿ ವಿಜ್ಞಾನ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
.ಜಮ್ಮು | ಬೆಂಕಿ ಅವಘಡ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು.ಕಾಂಗ್ರೆಸ್ಗೆ ಸಂವಿಧಾನ ಒಂದು ಕುಟುಂಬದ 'ಖಾಸಗಿ ಆಸ್ತಿ': ಅಮಿತ್ ಶಾ.ಫಾರ್ಮುಲಾ ಇ ರೇಸ್ ಅವ್ಯವಹಾರ: KT ರಾಮರಾವ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ.ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ: ದೇವೇಗೌಡ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.