ಜೋಧಪುರ: ರಾಜಸ್ಥಾನದ ಜೋಧಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತದರ ಅಂಗ ಸಂಸ್ಥೆಗಳ ಮೂರು ದಿನಗಳ ಅಖಿಲ ಭಾರತ ಸಮನ್ವಯ ಸಭೆಯು ಶುಕ್ರವಾರ ಆರಂಭಗೊಂಡಿದೆ.

ಸಂಘಟನೆಯ ಮುಖ್ಯಸ್ಥ ಮೋಹನ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪಾಲ್ಗೊಂಡಿದ್ದಾರೆ. ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಮಾಜಿಕ ದೃಷ್ಟಿಕೋನ ಕುರಿತು ಪ್ರಮುಖವಾಗಿ ಈ ಸಭೆಯಲ್ಲಿ ಚರ್ಚೆಯ ನಡೆಯಲಿದೆ ಎಂದೆನ್ನಲಾಗಿದೆ.

‘ಸಾಮಾಜಿಕ ಸಾಮರಸ್ಯದ ಉತ್ತೇಜನ, ಕೌಟುಂಬಿಕ ವ್ಯವಸ್ಥೆ ಬಲಪಡಿಸುವುದು, ಪರಿಸರ ಸ್ನೇಹಿ ಜೀವನಶೈಲಿಗೆ ಒತ್ತು, ಸ್ವಾವಲಂಬಿ ರಚನೆ ಮತ್ತು ನಾಗರಿಕರ ತೃಪ್ತಿ, ದೇಶದ ಹಲವು ಭಾಗಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳ ಜತೆಯಲ್ಲೇ ಕರ್ತವ್ಯ ಎಂಬ ಐದು ವಿಶಾಲ ವಿಷಯಗಳ ಮೇಲೆ ಚರ್ಚೆ ನಡೆಯಲಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ABVP), ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ವಿದ್ಯಾ ಭಾರತಿ ಸೇರಿದಂತೆ ಆರ್ಎಸ್ಎಸ್ನ 32 ಅಂಗಸಂಸ್ಥೆಗಳ 320 ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಸಂಸ್ಥೆಗಳ ಪ್ರತಿನಿಧಿಗಳು ತಮ್ಮ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಲಿದ್ದಾರೆ. ಇದರಲ್ಲಿ ತಾವು ನಡೆಸಿದ ಕಾರ್ಯಗಳು, ಅನುಭವ ಮತ್ತು ಸಾಧನೆಗಳನ್ನು ವಿವರಿಸಲಿದ್ದಾರೆ. ಈ ಮೂರು ದಿನಗಳ ಸಭೆಯಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಸಮಾಲೋಚನೆ, ಸಮನ್ವಯತೆ ಮತ್ತು ವಿವಿಧ ಸಂಘಗಳಲ್ಲಿ ಉತ್ಸಾಹವನ್ನು ತುಂಬುವ ಕೆಲಸ ನಡೆಯಲಿದೆ. ಇಲ್ಲಿ ಹಂಚಿಕೊಳ್ಳಲಾಗುವ ಆಲೋಚನೆ ಮತ್ತು ಅನುಭವಗಳನ್ನು ಆಧರಿಸಿ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲಾಗುವುದು’ ಎಂದಿದ್ದಾರೆ.

‘ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರ ಈಶಾನ್ಯ ಭಾಗದ ಬುಡಕಟ್ಟು ಪ್ರದೇಶಗಳನ್ನು ಒಳಗೊಂಡು ದೇಶದ ವಿವಿಧ ಭಾಗಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಕುರಿತ ಚರ್ಚೆಗಳು ನಡೆಯಲಿವೆ. ನೂತನ ಶಿಕ್ಷಣ ನೀತಿ (NEP-2020) ಅನುಷ್ಠಾನ ಕುರಿತೂ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು, ಅವರಿರುವ ಪ್ರದೇಶದಲ್ಲಿ ಸಕಾರಾತ್ಮಕ ಸಾಮಾಜಿಕ ಪರಿವರ್ತನೆ ತರುವ ಕುರಿತೂ ಚರ್ಚೆಗಳು ನಡೆಯಲಿವೆ’ ಎಂದೆನ್ನಲಾಗಿದೆ.

ಇದೇ ಸಾಲಿನಲ್ಲಿ ಆರ್ಎಸ್ಎಸ್ನ ಶತಮಾನೋತ್ಸವ ಆಚರಣೆ ನಡೆಯಲಿದ್ದು, ಅ. 2ರಿಂದು ನಾಗ್ಪುರದಲ್ಲಿ ಆಯೋಜನೆಗೊಳ್ಳುವ ವಿಜಯದಶಮಿ ಕಾರ್ಯಕ್ರಮದಲ್ಲಿ ಸರಸಂಗಚಾಲಕ್ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಇದಾದ ನಂತರ ದೇಶದಲ್ಲೆಲ್ಲಾ ಸ್ವಯಂಸೇವಕರು ಸಮವಸ್ತ್ರದಲ್ಲಿ ಪಥಸಂಚಲನ ನಡೆಸಲಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಹಿಂದೂ ಸಮಾವೇಶಗಳು, ಪ್ರತಿಮನೆ ತಲುಪುವ ಅಭಿಯಾನ, ಸಾಮರಸ್ಯ ಸಭೆಗಳು, ಪ್ರಮುಖ ನಾಗರಿಕರನ್ನು ಒಳಗೊಂಡ ಬೌದ್ಧಿಕ ಕೂಟಗಳು ಮತ್ತು ಯುವ ಕಾರ್ಯಕ್ರಮಗಳನ್ನು ದೇಶವ್ಯಾಪಿ ನಡೆಸಲಾಗುತ್ತದೆ ಎಂದು ಸಂಘದ ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.