ತಿರುವನಂತಪುರ: ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಯ ಪೀಠ ಕಾಣೆಯಾಗಿದ್ದರ ಹಿಂದೆ ಪಿತೂರಿ ನಡೆದಿದೆ ಎಂದು ಕೇರಳ ದೇವಸ್ವಂ ಸಚಿವ ವಿ.ಎನ್. ವಾಸವನ್ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಆರೋಪಿಸಿದೆ.

ಪೀಠವನ್ನು ಕೊಡುಗೆಯಾಗಿ ನೀಡಿದ್ದ ವೆಂಜರ್ಮೂಡ್ನ ಉನ್ನಿಕೃಷ್ಣನ್ ಪೊಟ್ಟಿ ಅವರೇ ಪೀಠವನ್ನು ಮುಚ್ಚಿಡುವ ಮೂಲಕ ನಾಟಕವಾಡಿದ್ದು, ಟಿಡಿಬಿ ಕಸ್ಟಡಿಯಿಂದಲೇ ಕಾಣೆಯಾಗಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಾಸವನ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಕೇರಳ ಹೈಕೋರ್ಟ್ನ ನಿರ್ದೇಶನದ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಯ ಪೀಠವನ್ನು ಟಿಬಿಬಿ ವಿಚಕ್ಷಣ ವಿಭಾಗವು ತಿರುವನಂತಪುರದಲ್ಲಿ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದರು. ಪೀಠವನ್ನು ಕೊಡುಗೆಯಾಗಿ ನೀಡಿದವರ ಸಂಬಂಧಿಕರ ಮನೆಯಿಂದ ಅದನ್ನು ಪತ್ತೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.

ಟಿಡಿಬಿ ವಿಜಿಲೆನ್ಸ್ ಮತ್ತು ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ವಿ. ಅವರ ನೇತೃತ್ವದ ತಂಡವು ಪೀಠವನ್ನು ಕೊಡುಗೆಯಾಗಿದ್ದ ನೀಡಿದ್ದ ವೆಂಜರ್ಮೂಡ್ನ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಶನಿವಾರ ಪತ್ತೆ ಮಾಡಿತ್ತು.

ವಿ.ಎನ್. ವಾಸವನ್ ಆರೋಪವನ್ನು ಉನ್ನಿಕೃಷ್ಣನ್ ಪೊಟ್ಟಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
.ಕೇರಳ: ಕಾಣೆಯಾಗಿದ್ದ ಶಬರಿಮಲೆ ದ್ವಾರಪಾಲಕರ ಸ್ವರ್ಣಲೇಪಿತ ಪೀಠ ಪತ್ತೆ.ಶಬರಿಮಲೆ: ₹1,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ ಘೋಷಣೆ.ಶಬರಿಮಲೆ | ದ್ವಾರಪಾಲಕ ಮೂರ್ತಿಯಲ್ಲಿ ಚಿನ್ನದ ತೂಕದಲ್ಲಿ ಕಡಿತ: ಹೈಕೋರ್ಟ್ ಕಿಡಿ.ಶಬರಿಮಲೆ: ಪ್ರಾಯೋಜಕತ್ವ ಸಮನ್ವಯಕಾರರ ನೇಮಕ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.