ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿದ್ದು, ಸ್ಪಾಟ್ ಬುಕಿಂಗ್ ಮತ್ತು ವರ್ಚುವಲ್ ಕ್ಯೂ (ಆನ್ಲೈನ್ ಬುಕಿಂಗ್) ವ್ಯವಸ್ಥೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ಅರುಣ್ ಎಸ್.ನಾಯರ್ ಅವರು ಉನ್ನತ ಮಟ್ಟದ ಸಭೆ ಬಳಿಕ ಈ ನಿರ್ಧಾರವನ್ನು ಘೋಷಿಸಿದರು.

ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ನಿಗದಿ ಪಡಿಸಿದ ದಿನದಂದೇ ಭಕ್ತರು ದೇಗುಲವನ್ನು ತಲುಪಬೇಕು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಕ್ತರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಹಾಗೂ ವ್ಯವಸ್ಥಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ವಯಸ್ಸಾದವರು, ಆರೋಗ್ಯ ಸಮಸ್ಯೆ ಇದ್ದವರು, ಮಕ್ಕಳು ಜೊತೆಗಿರುವ ಕುಟುಂಬಗಳು ದಟ್ಟ ಅರಣ್ಯ ಪ್ರದೇಶದ ಮೂಲಕವಾಗಿ ದೇಗುಲ ತಲುಪುವುದನ್ನು ತಪ್ಪಿಸಿ ನೀಲಕ್ಕಲ್–ಪಂಬಾ ಮಾರ್ಗದ ಮೂಲಕ ಸನ್ನಿಧಾನಕ್ಕೆ ಭೇಟಿ ನೀಡಬಹುದು’ ಎಂದು ಸಲಹೆ ನೀಡಲಾಗಿದೆ.

ದೇಗುಲಕ್ಕೆ ತಲುಪುವ ದಾರಿಯಲ್ಲಿ ಅನಾರೋಗ್ಯಕ್ಕೀಡಾಗುವ ಯಾತ್ರಾರ್ಥಿಗಳಿಗೆ ನೆರವಾಗಲು ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಅಧಿಕಾರಿಗಳು, ರಕ್ಷಣಾ ಪಡೆಗಳು, ಎನ್ಡಿಆರ್ಎಫ್ ತಂಡಗಳು ಸಿದ್ಧವಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.