ಮುಂಬೈ: ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ಕಾಂಗ್ರೆಸ್ ಸೇರಲು ಮುಂದಾಗಿದ್ದು, ದೆಹಲಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಹೇಳಿದ್ದಾರೆ.

ರಾವುತ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಅಂತ್ಯವಾಗುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ(ಯುಬಿಟಿ) ರಾವುತ್ ಅವರನ್ನು ಮರು ಆಯ್ಕೆ ಮಾಡಲು ಬೇಕಾದಷ್ಟು ಶಾಸಕರ ಬಲ ಹೊಂದಿಲ್ಲ ಎಂದಿದ್ದಾರೆ.

ಕಳೆದ ನವೆಂಬರ್ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ ಶಿವಸೇನಾ(ಯುಬಿಟಿ) 20 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

‘ಶಿವಸೇನಾ(ಯುಬಿಟಿ) ಪಕ್ಷದಲ್ಲಿ ಎಷ್ಟು ದಿನ ಇರಲಿದ್ದೇವೆ ಎಂಬ ಬಗ್ಗೆ ಸಾಮ್ನಾದಲ್ಲಿ(ಶಿವಸೇನಾದ ಉದ್ಧವ್ ಬಣದ ಮುಖವಾಣಿ) ಸಂಜಯ್ ರಾವುತ್ ಬರೆಯಬೇಕು. ಕಾಂಗ್ರೆಸ್ ಸೇರಲು ಮಾತುಕತೆ ನಡೆಸಿರುವ ನಾಯಕರ ಹೆಸರನ್ನೂ ಬಹಿರಂಗಪಡಿಸಬೇಕು. ಈ ವಿವಾದದ ಬಗ್ಗೆ ಅವರು ಹೇಳಿಕೆ ನೀಡಬೇಕು’ಎಂದು ರಾಣೆ ಸುದ್ದಿಗಾರರಿಗೆತಿಳಿಸಿದ್ದಾರೆ.

ಸಿಎಂ ದೇವೇಂದ್ರ ಫಡಣವೀಸ್ ಮತ್ತು ಮತ್ತು ಡಿಸಿಎಂ ಏಕನಾಥ್ ಶಿಂದೆ ನಡುವಿನ ಸಂಬಂಧ ಹಳಸಿದ್ದು, ರಾಜ್ಯದ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ರಾವುತ್ ಆರೋಪಿಸಿದ ಬೆನ್ನಲ್ಲೇ ರಾಣೆ ಹೇಳಿಕೆ ಹೊರಬಿದ್ದಿದೆ.

ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್ಥೋಕ್ನಲ್ಲಿ, ಫಡಣವೀಸ್ ಮತ್ತು ಶಿಂದೆ ನಡುವಿನ ಹಳಸಿದ ಸಂಬಂಧ ರಾಜ್ಯದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ರಾವುತ್ ಟೀಕಿಸಿದ್ದರು.

2024ರ ವಿಧಾನಸಭಾ ಚುನಾವಣೆಯ ನಂತರ ಶಿಂದೆ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಿಲ್ಲ. ಶಿಂದೆ ಆ ಸ್ಥಾನವನ್ನು ಮರಳಿ ಪಡೆಯಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ರಾವುತ್ ಬರೆದುಕೊಂಡಿದ್ದರು.
.ಫಡಣವೀಸ್–ಶಿಂದೆ ವೈಷಮ್ಯದಿಂದ ಮಹಾರಾಷ್ಟ್ರ ಪ್ರಗತಿಗೆ ಹೊಡೆತ: ಸಂಜಯ್ ರಾವುತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.