ಲಖನೌ/ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ನಡೆಯುತ್ತಿರುವ ಮೊದಲ ದೀಪಾವಳಿಯ ಆಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದು, ಹಬ್ಬದಂದು ನಗರದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಎಂಟನೇ ದೀಪೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಪೊಲೀಸ್ ಮತ್ತು ಪೌರಾಡಳಿತವು ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿವೆ.

‘ದೀಪೋತ್ಸವದ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ದೀಪಗಳನ್ನು ಇಡುವ ಕಾರ್ಯ ನಡೆಯುತ್ತಿದೆ. ಲೇಸರ್, ಧ್ವನಿ ಮತ್ತು ಡ್ರೋನ್ಗಳ ಪೂರ್ವಭಾವಿ ಪ್ರದರ್ಶನ ಪ್ರಗತಿಯಲ್ಲಿದೆ,’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ದೀಪೋತ್ಸವದಲ್ಲಿ ಪವಿತ್ರ ನಗರಿಯ ಧಾರ್ಮಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಪ್ರದರ್ಶಿಸುವ ಉದ್ದೇಶವಿದೆ. ಇದಕ್ಕಾಗಿ ಆರು ರಾಷ್ಟ್ರಗಳಾದ ಮ್ಯಾನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ ಕಲಾವಿದರ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಉತ್ತರಾಖಂಡದ ರಾಮಲೀಲಾ ಪ್ರದರ್ಶನ, ವಿವಿಧ ರಾಜ್ಯಗಳ ಕಲಾವಿದರ ಕಲಾಪ್ರದರ್ಶನವೂ ಇರಲಿದೆ. ಹಬ್ಬದ ವೇಳೆ ಪಶು ಸಂಗೋಪನಾ ಇಲಾಖೆಯು 1,50,000 ‘ಗೋ ದೀಪಗಳನ್ನು’ ಹಚ್ಚುವುದಾಗಿ ಹೇಳಿದೆ.

ಪರಿಸರ ಕಾಪಾಡುವ ದೃಷ್ಟಿಯಿಂದ ಹಾಗೂ ಕಲೆ ಉಂಟಾಗುವುದನ್ನು ತಪ್ಪಿಸಲು ವಿಶೇಷ ದೀಪಗಳನ್ನು ಬೆಳಗಲಾಗುತ್ತಿದೆ. ಅ.30ರಂದು 30,000ಕ್ಕೂ ಹೆಚ್ಚಿನ ಸ್ವಯಂಸೇವಕರು ಅಲಂಕಾರ ಕೆಲಸಕ್ಕೆ ನೆರವಾಗಲಿದ್ದಾರೆ. ಪೂರ್ಣ ಕಾರ್ಯಕ್ರಮದ ನೇರ ಪ್ರದರ್ಶನ ಟಿವಿ ಪರದೆಯಲ್ಲಿ ಬಿತ್ತರವಾಗಲಿದೆ. ಅಯೋಧ್ಯೆಯ ಹಲವು ಕಡೆ ಕಾರ್ಯಕ್ರಮ ವೀಕ್ಷಣೆಗೆ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಇಡೀ ನಗರವನ್ನು ಹೂ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತಿದೆ.

ಈ ಬಾರಿಯ ದೀಪೋತ್ಸವ ‘ಅದ್ವಿತೀಯ’ ಹಾಗೂ ‘ಅದ್ಭುತ’ವಾಗಿರುತ್ತದೆ ಎಂದು ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ರಾಮಾಯಣ ನಡೆದ ಕಾಲಘಟ್ಟವಾದ ತ್ರೇತಾಯುಗದ ಮಾದರಿಯಲ್ಲಿ ಇಲ್ಲಿನ ಪರಿಸರ ಭಾಸವಾಗುವಂತೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಸುಮಾರು ಒಂದು ಲಕ್ಷ ಜನರು ದರ್ಶನಕ್ಕೆ ಬರುತ್ತಿದ್ದಾರೆ ಎಂದು ಅಯೋಧ್ಯೆ ಮೇಯರ್ ತಿಳಿಸಿದ್ದಾರೆ.

‘ರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ನಡೆಯುತ್ತಿರುವ ಈ ವರ್ಷದ ದೀಪೋತ್ಸವ ಕಾಣಲು ನಾವು ಕಾತರರಾಗಿದ್ದೇವೆ. ಇಲ್ಲಿನ ಪರಿಸರ ಅಲಂಕೃತಗೊಂಡಿದೆ. ಸ್ಥಳೀಯರಲ್ಲಿ ಉತ್ಸಾಹ ಕಾಣುತ್ತಿದೆ. ಈ ಸ್ಥಳದ ನಿವಾಸಿಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಸ್ಥಳೀಯ ನಿವಾಸಿ ಪ್ರಜ್ವಲ್ ಸಿಂಗ್ ಹೇಳಿದ್ದಾರೆ.

ಈ ಮುನ್ನ ಬಾಲರಾಮ ಕೇವಲ ಟೆಂಟ್ನಲ್ಲಿರುವುದನ್ನು ಕಂಡು ಬೇಸರವಾಗುತ್ತಿತ್ತು. ಆದರೆ ಈಗ ಹೊಸ ಮಂದಿರದಿಂದಲೇ ರಾಮ ಪಾಲ್ಗೊಳ್ಳುತ್ತಿರುವುದು ಎಲ್ಲರಲ್ಲೂ ಹರ್ಷ ತಂದಿದೆ
ಅಯೋಧ್ಯೆಯ ಮಹಂತ್ ರಾಜು ದಾಸ್ ಹನುಮಾನ್ಗರಿ ದೇವಸ್ಥಾನದ ಅರ್ಚಕ

ದೀಪಾವಳಿ ಐತಿಹಾಸಿಕವಾಗಿರಲಿದೆ: ಪ್ರಧಾನಿ ಮೋದಿ

ನವದೆಹಲಿ: ಈ ಬಾರಿಯ ದೀಪಾವಳಿ ಐತಿಹಾಸಿಕ ಎನಿಸಿಕೊಳ್ಳಲಿದೆ. 500 ವರ್ಷಗಳ ಕಾಯುವಿಕೆ ನಂತರ ಬಾಲರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಹಬ್ಬದ ದಿನ ಅಸಂಖ್ಯ ದೀಪಗಳು ಬೆಳಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 'ರಾಮ ಮನೆಗೆ ಮರಳಿದ ದಿನವೇ ದೀಪಾವಳಿ. ಆದರೆ ರಾಮನ ಬರುವಿಕೆಯ ನಿರೀಕ್ಷೆ ಈ ಬಾರಿ 14 ವರ್ಷಗಳಲ್ಲಿ ಈಡೇರಲಿಲ್ಲ ಬದಲಿಗೆ 500 ವರ್ಷ ಕಾಯಬೇಕಾಯಿತು’ ಎಂದು ತಿಳಿಸಿದ್ದಾರೆ. ಸುಮಾರು ₹12850 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಅವರು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯನ್ನು 70 ವರ್ಷ ಹಾಗೂ ಅದನ್ನು ದಾಟಿದ ಎಲ್ಲ ಹಿರಿಯ ನಾಗರಿಕರಿಗೂ ವಿಸ್ತರಣೆ ಮಾಡಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.