ನವದೆಹಲಿ:ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳು ನಡೆಯಲಿರುವ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರಿಂದ ಸಂಸದ ಶಶಿ ತರೂರ್ ಅನುಮತಿ ಪಡೆದಿದ್ದಾರೆ.

‘ಶಶಿ ತರೂರ್ ಬಯಸುವುದಾದರೆ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧಿಸಬಹುದು. ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಲು ಅವಕಾಶವಿದೆ’ ಎಂದು ಸೋನಿಯಾ ಗಾಂಧಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದಕ್ಕೂ ಹಿಂದೆ, ಸೋಮವಾರ ಮಧ್ಯಾಹ್ನ ತರೂರ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಪಕ್ಷದ ಸಾಂಸ್ಥಿಕ ಬದಲಾವಣೆ ಬಗ್ಗೆ ಸೊಲ್ಲೆತ್ತಿದ್ದ ಜಿ23 ನಾಯಕರಲ್ಲಿ ತರೂರ್ ಅವರೂ ಒಬ್ಬರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅವರೇ ವಹಿಸಿಕೊಳ್ಳಬೇಕು ಎಂದು ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ನಿರ್ಣಯ ಅಂಗೀಕರಿಸಿರುವ ನಡುವೇಯೇ, ಶಶಿ ತರೂರ್ ಸ್ಪರ್ಧೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಇದೇ 22ರಂದು ಹೊರಡಿಸಲಾಗುತ್ತಿದೆ. ಚುನಾವಣೆಗೆ ಇದೇ 25ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆದು, 19ರಂದು ಫಲಿತಾಂಶ ಹೊರಬೀಳಿದೆ.

ಇವುಗಳನ್ನೂ ಓದಿ

ಕಾಂಗ್ರೆಸ್ ಸುಧಾರಣೆ: ಯುವ ಸದಸ್ಯರ ಮನವಿಗೆ ತರೂರ್ ಅನುಮೋದನೆ

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆ: ಸೋನಿಯಾ ಗಾಂಧಿ ಭೇಟಿಯಾದ ಶಶಿ ತರೂರ್

ಕಾಳಿ ಮಾತೆ ಕುರಿತಾದ ಹೇಳಿಕೆ: ಮಹುವಾ ಮೊಯಿತ್ರಾ ಬೆಂಬಲಕ್ಕೆ ನಿಂತ ಶಶಿ ತರೂರ್

ಸ್ವದೇಶದಲ್ಲಿ ಆಡುವ ಮತಾಂಧ ಮಾತಿನ ವಿದೇಶಿ ಪರಿಣಾಮದ ಬಗ್ಗೆ ಅರಿವಿರಬೇಕು: ತರೂರ್

ಪ್ರಜಾವಾಣಿ ಚರ್ಚೆ| ದೇಶದ ಉಳಿವಿಗೆ ಕಾಂಗ್ರೆಸ್ ಅಗತ್ಯ: ಶಶಿ ತರೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.