ಪಿತ್ತೋರಗಢ (ಉತ್ತರಾಖಂಡ): ಉತ್ತರಾಖಂಡದಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವ ಕಾರಣ ರಾಜಸ್ಥಾನದ ನಾಲ್ವರು ಬಿ.ಎಡ್ ವಿದ್ಯಾರ್ಥಿಗಳು ಮುನ್ಸಿಯಾರಿ ಪರೀಕ್ಷಾ ಕೇಂದ್ರವನ್ನು ತಲುಪಲು ಹೆಲಿಕಾಪ್ಟರ್ ಬಾಡಿಗೆಗೆ ತೆಗೆದುಕೊಂಡಿದ್ದರು.

ಒಮರಾಮ್ ಜಾಟ್, ಮಂಗಲಾಂ ಜಾಟ್, ಪ್ರಕಾಶ್ ಗೋದಾರ ಜಾಟ್ ಮತ್ತು ನರಪತ್ ಕುಮಾರ್ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು.

‘ಆಗಸ್ಟ್ 31ರಂದು ಹಲ್ದಾವಾನಿಗೆ ಬಂದಾಗ ಭೂಕುಸಿತದಿಂದ ಪರೀಕ್ಷಾ ಕೇಂದ್ರದ ಮಾರ್ಗಗಳಲ್ಲಿ ಸಂಚಾರಕ್ಕೆ ರದ್ದಾಗಿರುವುದು ತಿಳಿಯಿತು. ಹಲ್ದಾವಾನಿ ಮತ್ತು ಮುನ್ಸಿಯಾರಿ ನಡುವೆ ಹೆಲಿಕಾಪ್ಟರ್ ಸೇವೆ ನೀಡುವುದು ತಿಳಿಯಿತು. ಆದರೆ, ಹವಾಮಾನ ವೈಪರೀತ್ಯದಿಂದ ಸೇವೆಯನ್ನು ತಾತ್ಕಲಿಕವಾಗಿ ರದ್ದು ಮಾಡಲಾಗಿತ್ತು. ಆದರೆ ವಿಮಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಜೊತೆ ಮಾತನಾಡಿದ ಬಳಿಕ ಅವರು ನಮಗೆ ಸಹಾಯ ಮಾಡಿದರು’ ಎಂದು ವಿದ್ಯಾರ್ಥಿ ಒಮರಾಮ್ ಜಾಟ್ ತಿಳಿಸಿದರು.

ಏಕಮುಖ ಪ್ರಯಾಣಕ್ಕೆ ₹5,200 ಪಾವತಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.