ಮೆಹ್ಸಾನಾ: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಂತೆ ಹುಟ್ಟೂರಾದ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಜೂಲಾಸನ್ ಗ್ರಾಮದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

ಭಾರತೀಯ ಕಾಲಮಾನದ ಪ್ರಕಾರ ಬುಧವಾರ ನಸುಕಿನ ಜಾವ 3.17ಕ್ಕೆ ಸುನಿತಾ ಮತ್ತವರ ತಂಡ ಭೂಮಿಗೆ ಬರಲಿದ್ದಾರೆ ಎನ್ನುವ ಸುದ್ದಿ ತಿಳಿದು ಗ್ರಾಮಸ್ಥರು ಗ್ರಾಮದ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಸುನಿತಾ ಅವರು ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ‘ಹರ ಹರ ಮಹಾದೇವ’ ಎಂದು ಕೂಗಿದ ಜನ, ನೃತ್ಯ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
.ಸುನಿತಾ ವಿಲಿಯಮ್ಸ್, ಬುಚ್ ಬಂದಿಳಿದ ಕ್ಷಣ ಹೇಗಿತ್ತು?: ವಿಡಿಯೊ ನೋಡಿ.9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ: ಸುರಕ್ಷಿತವಾಗಿ ಭುವಿಗಿಳಿದ ಸುನಿತಾ, ಬುಚ್.
ಈ ಕುರಿತು ಮಾತನಾಡಿರುವ ಸುನಿತಾ ಅವರ ಸಹೋದರ ನವೀನ್ ಪಾಂಡ್ಯ, ಗ್ರಾಮಸ್ಥರು ಸುನಿತಾ ಕ್ಷೇಮಕ್ಕಾಗಿ ‘ಅಖಂಡ ಜ್ಯೋತಿ’ಯನ್ನು ಬೆಳಗಿದ್ದಾರೆ. ಊರಲ್ಲಿ ಹೋಳಿ ಮತ್ತು ದೀಪಾವಳಿಯ ಸಂಭ್ರಮ ಮನೆಮಾಡಿದೆ. ಸುನಿತಾ ಅವರನ್ನು ಗ್ರಾಮಕ್ಕೆ ಆಹ್ವಾನಿಸಲು ಕಾಯುತ್ತಿದ್ದೇವೆ ಎಂದಿದ್ದಾರೆ.

ಸುನಿತಾ 2007 ಮತ್ತು 2013ರಲ್ಲಿ ಸೇರಿ ಒಟ್ಟು ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಸುನಿತಾ ಅವರ ತಂದೆ ದೀಪಕ್ ಪಾಂಡ್ಯ 1957 ರಲ್ಲಿ ಜೂಲಾಸನ್ನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.
.ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ಫೋಟೊಗೆ ಪೋಸ್ ಕೊಟ್ಟ ಸುನಿತಾ, ಬುಚ್.ಸುನಿತಾ ವಿಲಿಯಮ್ಸ್, ಬುಚ್ ಹೊಸ ದಾಖಲೆ; ಬಾಹ್ಯಾಕಾಶದಲ್ಲಿ 5.5 ಗಂಟೆ ನಡಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.