ನವದೆಹಲಿ: ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಕಳುಹಿಸುವಂತೆ ಆ. 11ರ ತನ್ನ ಆದೇಶವನ್ನು ಮಾರ್ಪಾಡು ಮಾಡಿರುವ ಸುಪ್ರೀಂ ಕೋರ್ಟ್, ಶುಕ್ರವಾರ ಹೊಸ ಆದೇಶ ಪ್ರಕಟಿಸಿದೆ.

ದೆಹಲಿ ಹಾಗೂ ಎನ್ಸಿಆರ್ನಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಬೇಕು. ಒಂದೊಮ್ಮೆ ಅವುಗಳಿಗೆ ರೇಬಿಸ್ ಸೋಂಕು ತಗುಲಿಲ್ಲವಾದರೆ ಮತ್ತು ಅವು ಕಚ್ಚುವ ಸ್ವಭಾವದವಲ್ಲ ಎಂದು ಖಾತ್ರಿಯಾದರೆ ಮಾತ್ರ ಹೊರಗೆ ಬಿಡಬೇಕು ಎಂದು ಹೇಳಿದೆ.

ನಾಯಿಗಳಿಗೆ ಆಹಾರವನ್ನು ಬೇಕಾಬಿಟ್ಟಿಯಾಗಿ ಬಿಸಾಡದೆ, ಅದಕ್ಕಾಗಿ ನಿರ್ದಿಷ್ಟ ಸ್ಥಳವನ್ನು ಸ್ಥಳೀಯ ಆಡಳಿತ ಗುರುತಿಸಬೇಕು. ಇದು ಆಯಾ ಬಡಾವಣೆಯ ಜನವಸತಿ ಪ್ರದೇಶ, ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ...
.ಬೀದಿ ನಾಯಿಗಳ ಸ್ಥಳಾಂತರ ಬೇಡ: ದೆಹಲಿಯಲ್ಲಿ ಶ್ವಾನ ಪ್ರಿಯರ ಪ್ರತಿಭಟನೆ .Street Dog Menace | ಪ್ರಜಾವಾಣಿ ಚರ್ಚೆ: ಬೀದಿ ನಾಯಿಗಳೂ ಹುಸಿ ಅನುಕಂಪವೂ.ಬೀದಿ ನಾಯಿ ಉಪಟಳಕ್ಕೆ ಕಡಿವಾಣ | ಎಲ್ಲರೂ ಹೊಣೆ ನಿಭಾಯಿಸಬೇಕು; ಸುಪ್ರೀಂ ಕೋರ್ಟ್.ಬೀದಿ ನಾಯಿ ಪ್ರಕರಣ: ಇಂದು ತ್ರಿಸದಸ್ಯ ಪೀಠದಿಂದ ವಿಚಾರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.