ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಬಾಂಬ್ ಸ್ಫೋಟ: ಸತ್ಯಮಂಗಲಂ ಹುಲಿ ಸಂರಕ್ಷಿತಾರಣ್ಯದಲ್ಲಿ ಹಸು ಸಾವು

Published 2 ಮಾರ್ಚ್ 2024, 10:50 IST
Last Updated 2 ಮಾರ್ಚ್ 2024, 10:50 IST
ಅಕ್ಷರ ಗಾತ್ರ

ಈರೋಡ್‌: ಇಲ್ಲಿನ ಸತ್ಯಮಂಗಲಂ ಹುಲಿ ಸಂರಕ್ಷಿತಾರಣ್ಯದಲ್ಲಿ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಮೃತಪಟ್ಟಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸತ್ಯಮಂಗಲಂ ಹುಲಿ ಸಂರಕ್ಷಿತಾರಣ್ಯಕ್ಕೆ ಸೇರಿದ ತಲವಾಡಿ ಸಮೀಪದ ಡಿಗಿನಾರೈ ಅರಣ್ಯ ಪ್ರದೇಶದ ತಾಯಪ್ಪ ಎಂಬವರಿಗೆ ಸೇರಿದ ಹಸು ಇದಾಗಿದೆ. ಶುಕ್ರವಾರ ಸಂಜೆ ಕಾಡಿನಲ್ಲಿ ಹಸುಗಳು ಮೇಯುತ್ತಿರುವಾಗ ಈ ಘಟನೆ ನಡೆದಿದೆ.

ಹುಲ್ಲಿನೊಳಗೆ ಇರಿಸಲಾಗಿದ್ದ ಬಾಂಬ್‌ ಅನ್ನು ಕಚ್ಚಿದ್ದರಿಂದ ಹಸುವಿನ ಮುಖಕ್ಕೆ ಗಾಯವಾಗಿದೆ. ಅದಾಗ್ಯೂ ಮನೆಗೆ ಮರಳಿದ್ದ ಹಸುವನ್ನು ಪಶುವೈದ್ಯರ ಬಳಿಕ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ತಾಯಪ್ಪ ತಿಳಿಸಿದ್ದು, ಅವರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಾಡು ಹಂದಿಗಳು ಹಾಗೂ ಇತರ ಪ್ರಾಣಿಗಳು ‌ಫಸಲಿಗೆ ದಾಳಿ ಮಾಡುವುದನ್ನು ತಡೆಯಲು ಇಲ್ಲಿನ ಕೆಲ ವ್ಯಕ್ತಿಗಳು ಬಾಂಬ್ ಇಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT