42 ವರ್ಷದ ಟೀ ಮಾಲೀಕರು ಕೀ ಕೊಡುತ್ತಿದ್ದಂತೆಯೇ ಸಿಬ್ಬಂದಿಯ ಮುಖದಲ್ಲಿ ಖುಷಿ ತುಂಬಿತ್ತು.
‘ಈ ರೀತಿಯ ಉಡುಗೊರೆಯನ್ನು ನಾವು ಎಂದೂ ಬಯಸಿರಲಿಲ್ಲ. ನಾವಾಗಿಯೇ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಮ್ಮ ಮಾಲೀಕರಿಂದ ಅದು ಸಿಕ್ಕಿತು. ಮಾಲೀಕರೊಂದಿಗೆ ಹಾಗೂ ಅವರ ತಂಡದೊಂದಿಗೆ ಕೆಲಸ ಮಾಡುತ್ತಿರುವುದೇ ನಮ್ಮ ಭಾಗ್ಯ’ ಎಂದು ಸಿಬ್ಬಂದಿಯೊಬ್ಬರು ಪಿಟಿಐಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಈ ಹಿಂದೆ ಹರಿಯಾಣದ ಮಿಟ್ಸ್‌ಕಾರ್ಟ್ ಕಂಪನಿಯು ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಕಾರು ನೀಡಿತ್ತು. ಕಂಪನಿಯ ಮುಖ್ಯಸ್ಥ ಎಂ.ಕೆ ಭಾಟಿಯಾ ಅವರು 12 ಉದ್ಯೋಗಿಗಳಿಗೆ ಹೊಸ ಟಾಟಾ ಪಂಚ್ ಕಾರಿನ ಕೀ ನೀಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.