ಮಾಸ್ಕೊ: ಸಾಮಾನ್ಯವಾಗಿ ರಸ್ತೆ ಬದಿಯಲ್ಲಿದ್ದ ಬೆಕ್ಕಿನ ಮರಿ ಅಥವಾ ನಾಯಿ ಮರಿಯನ್ನು ಪ್ರಾಣಿ ಪ್ರಿಯರು ಮನೆಗೆ ತಂದು ಸಾಕುತ್ತಾರೆ. ಆದರೆ, ಮನೆಗೆ ತಂದ ಮರಿ ಸಾಕು ಪ್ರಾಣಿಯಲ್ಲ, ಕಾಡು ಪ್ರಾಣಿ ಎಂದು ಗೊತ್ತಾದರೆ?.. ಅಂಥಹ ಒಂದು ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾ ಮೂಲದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಚಿರತೆ ಮರಿಯನ್ನು ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದು ಸಾಕಿದ್ದಾರೆ. ಮರಿ ಬೆಳೆದು ದೊಡ್ಡದಾದಂತೆ ಅದು ಕಪ್ಪು ಚಿರತೆ ಎಂದು ಗೊತ್ತಾಗಿದೆ.

ಮಹಿಳೆ ಚಿರತೆ ಮರಿಯನ್ನು ತರುವ ಮತ್ತು ಅದರ ಬೆಳವಣಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೊದಲ್ಲಿ ಮಹಿಳೆ ಮತ್ತು ಆಕೆ ಸಾಕಿದ ನಾಯಿ ಹಾಗೂ ಚಿರತೆಯ ನಡುವಿನ ಬಾಂಧವ್ಯದ ದೃಶ್ಯಗಳಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ @factmayor ಎನ್ನುವ ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ @luna_the_pantera ಎನ್ನುವ ಬಳಕೆದಾರರು ಸೆ.21ರಂದು ವಿಡಿಯೊವನ್ನು ಹಂಚಿಕೊಂಡಿದ್ದರು.

ವಿಡಿಯೊ ಹಂಚಿಕೊಂಡಾಗಿನಿಂದ 9.1 ಮಿಲಿಯನ್ ವೀಕ್ಷಣೆ ಪಡೆದಿದ್ದು, 14 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಅಲ್ಲದೆ ಪ್ರಾಣಿಯನ್ನು ರಕ್ಷಿಸಿದ್ದಕ್ಕೆ ಹಲವರು ಅಭಿನಂದಿಸಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.