ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಅಯೋಧ್ಯೆಗೆ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದ ಬಿಜೆಪಿ

Published 23 ಜನವರಿ 2024, 15:05 IST
Last Updated 23 ಜನವರಿ 2024, 15:05 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ಬಿಜೆಪಿ ಘಟಕವು ಅಯೋಧ್ಯೆಯ ರಾಮಮಂದಿರ ದರ್ಶನ ಮಾಡಲು ಬಯಸುವ ತನ್ನ ಕಾರ್ಯಕರ್ತರಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

‘ಶ್ರೀ ರಾಮಮಂದಿರ ದರ್ಶನ ಅಭಿಯಾನದ ಅಂಗವಾಗಿ ಜನವರಿ 29ರಿಂದ 17 ವಿಶೇಷ ರೈಲುಗಳು ರಾಜ್ಯದಿಂದ ಅಯೋಧ್ಯೆಗೆ ಸಂಚರಿಸಲಿವೆ’ ಎಂದು ಬಿಜೆಪಿ ಮೂಲಗಳು ಮಂಗಳವಾರ ತಿಳಿಸಿವೆ.

17 ಲೋಕಸಭಾ ಕ್ಷೇತ್ರಗಳಿಗೆ ತಲಾ ಒಂದು ರೈಲು ಮೀಸಲಿರಿಸಲಾಗಿದೆ. ಈ ರೈಲುಗಳಿಗೆ ಆಸ್ತ ಎಂದು ಹೆಸರಿಡಲಾಗಿದೆ.

ಸಿಕಂದರಾಬಾದ್‌ ಜಿಲ್ಲೆಯಿಂದ ಅಯೋಧ್ಯೆಗೆ ‌ಜನವರಿ 29ರಂದು ಮೊದಲ ವಿಶೇಷ ರೈಲು ಹೊರಡಲಿದ್ದು, ಫೆಬ್ರುವರಿ 2ರಂದು ರಾಜ್ಯಕ್ಕೆ ಹಿಂತಿರುಗಲಿದೆ. ಝಹಿರಾಬಾದ್‌ ಕ್ಷೇತ್ರದ ಕಾರ್ಯಕರ್ತರಿರುವ ಕೊನೆಯ ರೈಲು ಫೆಬ್ರುವರಿ 15ರಂದು ಹೊರಡಲಿದ್ದು, ಫೆ.19ಕ್ಕೆ ಹಿಂದಿರುಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT