ಹೈದರಾಬಾದ್: ಟಿಆರ್‌ಎಸ್ ಶಾಸಕರನ್ನು ಪಕ್ಷ ಬಿಡುವಂತೆ ಆಮಿಷವೊಡ್ಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿರುವುದಾಗಿ ತೆಲಂಗಾಣ ಪೊಲೀಸರು ಬುಧವಾರ ಹೇಳಿದ್ದಾರೆ.

‘ಪಕ್ಷ ಬಿಡಲು ಹೇಳಿ ನಮಗೆ ಆಮಿಷಗಳನ್ನು ಒಡ್ಡಲಾಗುತ್ತಿದೆ‘ ಎಂದು ಟಿಆರ್‌ಎಸ್ ಶಾಸಕರು ಮಾಹಿತಿ ನೀಡಿದ್ದರು. ಟಿಆರ್‌ಎಸ್ ತೊರೆದರೆ ಹಣ, ಅಧಿಕಾರ ನೀಡಲಾಗುವುದು ಎಂದು ಶಾಸಕರಾದ ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತರಾವ್ ಮತ್ತು ರೋಹಿತ್ ರೆಡ್ಡಿ ಅವರಿಗೆ ಮೂವರು ಭರವಸೆ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಶಾಸಕರನ್ನು ಯಾವ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ. ಇದು ಬಿಜೆಪಿಯದ್ದೇ ಕೃತ್ಯ ಎಂದು ಟಿಆರ್‌ಎಸ್ ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ಸರ್ಕಾರದ ಮುಖ್ಯ ಸಚೇತಕ ಬಾಲ್ಕ ಸುಮನ್ ’ಟಿಆರ್‌ಎಸ್ ಪಕ್ಷದ ಶಾಸಕರು ಕೆಸಿಆರ್ ಅವರ ಸೈನಿಕರು. ತೆಲಂಗಾಣದ ಸ್ವಾಭಿಮಾನದ ಪ್ರತಿನಿಧಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತೆಲಂಗಾಣ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕರು ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇವುಗಳನ್ನೂ ಓದಿ

ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಸ್ಥಿತಿ ತರಲು ಕೆಸಿಆರ್ ಜತೆ ಮೈತ್ರಿ: ಎಚ್ಡಿಕೆ

ರಾಷ್ಟ್ರೀಯ ಪಕ್ಷ ಘೋಷಣೆ: ಉಚಿತ ಮದ್ಯ, ಕೋಳಿ ವಿತರಿಸಿದ ಟಿಆರ್‌ಎಸ್ ನಾಯಕ

ತೆಲಂಗಾಣ: ಅಸ್ಸಾಂ ಸಿಎಂ ಮೈಕ್ ಕಿತ್ತೆಸೆದ ಟಿಆರ್‌ಎಸ್ ನಾಯಕನ ವಿರುದ್ಧ ದೂರು ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.