ನವದೆಹಲಿ: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಕಗಳ ಕೊಬ್ಬು ಕಲಬೆರಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರನ್ನು ತಿರುಪತಿಯ ನ್ಯಾಯಾಲಯವೊಂದು ಫೆ. 20ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ತಿರುಪತಿ ಲಾಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಪ್ರಕರಣ:CBIನಿಂದ ನಾಲ್ವರ ಬಂಧನ.
ಪ್ರಕರಣದಲ್ಲಿ ಸಿಬಿಐನ ವಿಶೇಷ ತನಿಖಾ ತಂಡವು ಪ್ರಸಾದ ತಯಾರಿಕೆಗೆ ತುಪ್ಪ ಪೂರೈಕೆ ಮಾಡಿದ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್, ಪೊಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಹಾಗೂ ಎ.ಆರ್ ಡೈರಿಯ ರಾಜು ರಾಜಶೇಖರನ್ ಅವರನ್ನು ಬಂಧಿಸಿತ್ತು.

ಬಂಧಿತರನ್ನು ಸೋಮವಾರ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಫೆ. 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತುಪ್ಪ ಪೂರೈಕೆಯಲ್ಲಿ ಪ್ರತಿಯೊಂದು ನಿಯಮವನ್ನು ಉಲ್ಲಂಘಿಸಿದ್ದನ್ನು ಸುಪ್ರೀಂ ಕೊರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡವು ಪತ್ತೆ ಮಾಡಿತ್ತು. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
.ತಿರುಪತಿ ತಿರುಮಲ ದೇವಾಲಯದ ಲಡ್ಡು ಪ್ರಸಾದ ನೀಡುವ ಕೌಂಟರ್ನಲ್ಲಿ ಅಗ್ನಿ ಆಕಸ್ಮಿಕ.
ದೇಗುಲಕ್ಕೆ ತುಪ್ಪ ಪೂರೈಸಲು ಎ.ಆರ್ ಡೈರಿ ಹೆಸರಿನಲ್ಲಿ ವೈಷ್ಣವಿ ಡೈರಿ ಟೆಂಡರ್ ಪಡೆದುಕೊಂಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ನಕಲಿ ದಾಖಲೆ ಸೃಷ್ಠಿಸಿದ್ದರು ಎಂದು ಮೂಲಗಳಿಂದ ಮಾಹಿತಿ ಬಂದಿದೆ.

ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಪಡೆಯುವುದಾಗಿ ಸುಳ್ಳು ಹೇಳಿಕೆ ನೀಡಿರುವುದನ್ನು ಎಸ್ಐಟಿ ಬಯಲಿಗೆಳೆದಿದೆ. ಅಲ್ಲದೆ ತಿರುಪತಿ ದೇವಸ್ಥಾನದ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಅದು ಹೊಂದಿರಲಿಲ್ಲ ಎನ್ನುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
.ಪಡಸಾಲೆ: ತಿರುಪತಿ ಲಡ್ಡು ಮತ್ತು ನಮ್ಮ ಜಡ್ಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.