ತಿರುಪುರ: ಬಾಂಗ್ಲಾದೇಶದಲ್ಲಿನ ರಾಜಕೀಯ ಅಶಾಂತಿಯು ದೇಶದ ನೂಲಿನ ಬಟ್ಟೆಗಳ ಕೇಂದ್ರ ಎಂಬ ಖ್ಯಾತಿಯನ್ನು ಹೊತ್ತಿರುವ ತಮಿಳುನಾಡು ರಾಜ್ಯದ ತಿರುಪುರಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ದೇಶದಲ್ಲಿ ಈ ವಲಯದಲ್ಲಿ ಆಗುವ ರಫ್ತಿನಲ್ಲಿ ಶೇಕಡ 55ರಷ್ಟು ಪಾಲನ್ನು ತಿರುಪುರ ಹೊಂದಿದೆ.

ವಿಶ್ವದಲ್ಲಿ ಉಡುಪುಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಅಮೆರಿಕ ಮತ್ತು ಯುರೋಪಿನ ಪ್ರಮುಖ ಬಟ್ಟೆ ಬ್ರ್ಯಾಂಡ್ಗಳು, ತಿರುಪುರದ ರಫ್ತುದಾರರ ಜೊತೆ ಮಾತುಕತೆ ನಡೆಸಿವೆ. ಬಟ್ಟೆಗಳ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಬ್ರ್ಯಾಂಡ್ಗಳು ಬಾಂಗ್ಲಾದೇಶದ ಆಚೆಗೂ ಕಣ್ಣು ಹಾಯಿಸುತ್ತಿವೆ. ಆದರೆ, ಬೇಡಿಕೆಯಲ್ಲಿ ಆಗಬಹುದಾದ ಹೆಚ್ಚಳವನ್ನು ನಿಭಾಯಿಸುವ ಶಕ್ತಿಯು ತಿರುಪುರದ ಮೂಲಸೌಕರ್ಯಕ್ಕೆ ಇದೆಯೇ ಎಂಬ ಪ್ರಶ್ನೆ ಇದೆ.

2024–25ರ ಹಣಕಾಸು ವರ್ಷದಲ್ಲಿ ತಿರುಪುರವು ನೂಲಿನ ಬಟ್ಟೆಗಳ ರಫ್ತಿನ ಮೂಲಕ ಅಂದಾಜು ₹40 ಸಾವಿರ ಕೋಟಿ ಗಳಿಸುವ ಅವಕಾಶ ಇದೆ. 2023–24ರಲ್ಲಿ ರಫ್ತು ಮೌಲ್ಯವು ₹30,690 ಕೋಟಿ ಆಗಿದೆ.

ಪ್ರಮುಖ ಬ್ರ್ಯಾಂಡ್ಗಳಾದ ವಾಲ್ಮಾರ್ಟ್, ಜಿಎಪಿ, ಕೊಸ್ಟ್ಕೊ, ಮಾರ್ಕ್ಸ್ ಆ್ಯಂಡ್ ಸ್ಪೆನ್ಸರ್, ಪ್ರೈಮಾರ್ಕ್, ಸಿ ಆ್ಯಂಡ್ ಎ, ಲೆಕ್ಕಪರಿಶೋಧನಾ ಸಂಸ್ಥೆಗಳನ್ನು ನೇಮಕ ಮಾಡಿ ತಿರುಪುರದ ಘಟಕಗಳ ರಫ್ತು ಸಾಮರ್ಥ್ಯವನ್ನು ಪರಿಶೀಲನೆಗೆ ಒಳಪಡಿಸಿವೆ.

ಮಕ್ಕಳ ಬಟ್ಟೆಗಳ ವಿಭಾಗದಲ್ಲಿ ಜನಪ್ರಿಯ ಬ್ರ್ಯಾಂಡ್ಗಳಾಗಿರುವ ಬಿಬಿ ಬೇಬಿ, ಆನೆಸ್ಟ್ ಬೇಬಿ ಕ್ಲೋತಿಂಗ್, ಮೋನಿಕಾ+ಆ್ಯಂಡಿ ತಿರುಪುರದಲ್ಲಿ ಯಾರಿಂದ ಬಟ್ಟೆಯನ್ನು ಖರೀದಿಸಬೇಕು ಎಂಬ ಪರಿಶೀಲನೆಯಲ್ಲಿವೆ.

ಒಟ್ಟಾರೆ ಸಿದ್ಧ ಉಡುಪುಗಳ ರಪ್ತು ಮೌಲ್ಯವು ಕಳೆದ ವರ್ಷದ ಅಕ್ಟೋಬರ್ನ ಮೌಲ್ಯಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ನಲ್ಲಿ ಶೇ 35ರಷ್ಟು ಹೆಚ್ಚಾಗಿದೆ. ಕೋವಿಡ್–19 ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಉದ್ಯಮಕ್ಕೆ ಇದು ಬಹಳ ಅಗತ್ಯವಾಗಿದ್ದ ವಿಶ್ವಾಸ ತುಂಬುವ ಕೆಲಸ ಮಾಡಿದೆ.

‘ಕೆಲವು ಘಟಕಗಳು ಹೆಚ್ಚುವರಿ ಬೇಡಿಕೆಗೆ ಅನುಗುಣವಾಗಿ ಬಟ್ಟೆ ಪೂರೈಸುತ್ತಿವೆ. ಈ ವಲಯದಲ್ಲಿ ನಾವು ಇನ್ನಷ್ಟು ಹೆಚ್ಚಿನ ಬೇಡಿಕೆಯನ್ನು ಕಾಣುವುದು ಖಚಿತ’ ಎಂದು ತಿರುಪುರ ರಫ್ತುದಾರರ ಸಂಘದ (ಟಿಇಎ) ಅಧ್ಯಕ್ಷ ಕೆ.ಎಂ. ಸುಬ್ರಮಣಿಯನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 10ರಷ್ಟು ಹೆಚ್ಚುವರಿ ಅವಕಾಶ ಸಿಕ್ಕರೂ ಪೂರೈಕೆ ಕಷ್ಟ’

ಬಾಂಗ್ಲಾದೇಶದಿಂದ ರಫ್ತಾಗುತ್ತಿದ್ದ ಬಟ್ಟೆಗಳಲ್ಲಿ ಶೇ 5ರಿಂದ ಶೇ 10ರಷ್ಟು ಬಟ್ಟೆಗಳ ರಫ್ತಿನ ಕಾರ್ಯಾದೇಶವು ತಿರುಪುರಕ್ಕೆ ದೊರೆತರೂ ಅದನ್ನು ಪೂರೈಸಲು ಇಲ್ಲಿನ ಮೂಲಸೌಕರ್ಯಕ್ಕೆ ಸಾಧ್ಯವಾಗದಿರಬಹುದು ಎಂದು ರಫ್ತಿನಲ್ಲಿ ತೊಡಗಿರುವ ಕೆಲವರು ಹೇಳುತ್ತಾರೆ. ‘ಬೃಹತ್ ಕಾರ್ಖಾನೆಗಳು ತಮ್ಮ ಪೂರ್ಣ ಸಾಮರ್ಥ್ಯದ ಶೇ 95ರವರೆಗೆ ಕಾರ್ಯಾಚರಣೆ ನಡೆಸುಸುತ್ತಿವೆ. ಆದರೆ ಎಂಎಸ್ಎಂಇ ವಲಯದ ಉದ್ದಿಮೆಗಳು ತಮ್ಮ ಪೂರ್ಣ ಸಾಮರ್ಥ್ಯದ ಶೇ 50ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ಜವಳಿ ರಫ್ತು ಕಂಪನಿ ಸ್ವೆಲ್ನಿಟ್ನ ಪಾಲುದಾರ ಕೆ.ಜಿ. ಗಣೇಶನ್ ಹೇಳಿದರು. ಕಾರ್ಮಿಕರ ಕೊರತೆಯು ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.