ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯುಟ್ಟೇ ಫುಟ್‌ಬಾಲ್‌ ಆಡಿದ ಸಂಸದೆ ಮಹುವಾ ಮೊಯಿತ್ರಾ: ಚಿತ್ರ ವೈರಲ್‌ 

Last Updated 19 ಸೆಪ್ಟೆಂಬರ್ 2022, 9:42 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಂಪಿ ಕಪ್ ಟೂರ್ನಮೆಂಟ್ 2022’ ರಲ್ಲಿ ಸೋಮವಾರ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೀರೆಯುಟ್ಟೇ ಫುಟ್‌ಬಾಲ್ ಆಡಿದ್ದಾರೆ. ಚಿತ್ರಗಳು ವೈರಲ್‌ ಆಗಿವೆ.

ಸ್ಫೋರ್ಟ್ಸ್‌ ಶೂಗಳನ್ನು ಹಾಕಿಕೊಂಡು, ತಮ್ಮ ಎಂದಿನ ಕರಿ ಕನ್ನಡಕ ಧರಿಸಿ ಫುಟ್‌ ಬಾಲ್‌ ಅನ್ನು ಕಿಕ್‌ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರಗಳನ್ನು ಮಹುವಾ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ‘ಕೃಷ್ಣನಗರ ‘ಎಂಪಿ ಕಪ್ ಟೂರ್ನಮೆಂಟ್ 2022’ರ ಫೈನಲ್‌ನ ಮೋಜಿನ ಕ್ಷಣಗಳಿವು. ಹೌದು, ನಾನು ಸೀರೆಯಲ್ಲೇ ಆಡುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT