ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು 02 ಜುಲೈ 2023

Published 2 ಜುಲೈ 2023, 13:08 IST
Last Updated 2 ಜುಲೈ 2023, 13:08 IST
ಅಕ್ಷರ ಗಾತ್ರ
Introduction

ಮಹಾರಾಷ್ಟ್ರದಲ್ಲಿ ಶಿಂದೆ ಸರ್ಕಾರಕ್ಕೆ ಬೆಂಬಲ ನೀಡಿ ಡಿಸಿಎಂ ಆದ ಎನ್‌ಸಿಪಿಯ ಅಜಿತ ಪವಾರ್!, ಈಶ್ವರಪ್ಪಗೆ ಸನ್ಮಾನಿಸಲು ಕನಕ ಗುರುಪೀಠ ಸ್ವಾಮೀಜಿ ಕೋರಿಕೆ: ನಿರಾಕರಿಸಿದ ಸಿದ್ದರಾಮಯ್ಯ, Kichcha46 Demon War Begins: ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಬಿಡುಗಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.

1

ಮಹಾರಾಷ್ಟ್ರದಲ್ಲಿ ಶಿಂದೆ ಸರ್ಕಾರಕ್ಕೆ ಬೆಂಬಲ ನೀಡಿ ಡಿಸಿಎಂ ಆದ ಎನ್‌ಸಿಪಿಯ ಅಜಿತ ಪವಾರ್!

ಎನ್‌ಸಿಪಿ ನಾಯಕ ಅಜಿತ್ ಪವಾರ್
ಎನ್‌ಸಿಪಿ ನಾಯಕ ಅಜಿತ್ ಪವಾರ್

ಭಾನುವಾರ ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ. ಇದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಜೊತೆಯಿರುವ 10ಕ್ಕೂ ಹೆಚ್ಚು ಶಾಸಕರ ಜೊತೆ ಬೆಂಬಲ ನೀಡಿರುವ ಅಜಿತ್ ಪವಾರ್, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನು ಪೂರ್ತಿ ಓದಿ

2

ಈಶ್ವರಪ್ಪಗೆ ಸನ್ಮಾನಿಸಲು ಕನಕ ಗುರುಪೀಠ ಸ್ವಾಮೀಜಿ ಕೋರಿಕೆ: ನಿರಾಕರಿಸಿದ ಸಿದ್ದರಾಮಯ್ಯ

ಬೆಂಗಳೂರು: ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯಲ್ಲಿ ಭಾನುವಾರ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠವು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಅವರು ಕೆ.ಎಸ್‌.ಈಶ್ವರಪ್ಪ ಅವರಿಗೆ ಸನ್ಮಾನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೇಳಿದಾಗ, ಇದಕ್ಕೆ ‘ನೀವೇ ಸನ್ಮಾನಿಸಿ’ ಎಂದು ಕೈಸನ್ನೇ ಮಾಡಿ ಮುಖ್ಯಮಂತ್ರಿ ಅತ್ತ ಮುಖ ಮಾಡುತ್ತಾರೆ.

ಇದನ್ನು ಪೂರ್ತಿ ಓದಿ

3

ಮಹಾರಾಷ್ಟ್ರ ಬಸ್‌ ಅಪಘಾತ | ಸಜೀವ ದಹನಗೊಂಡ 24 ಮೃತದೇಹಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ

ನಾಗ್ಪುರ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಬಸ್‌ ದುರಂತದಲ್ಲಿ ಸಜೀವ ದಹನಗೊಂಡ 25 ಜನರ ಪೈಕಿ 24 ಜನರ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಪೂರ್ತಿ ಓದಿ

4

ಬಗೆದಷ್ಟೂ ವಿಸ್ತರಿಸುತ್ತಿರುವ ಅಜಿತ್‌ ರೈ ಸಾಮ್ರಾಜ್ಯ: ಪೊಲೀಸರಿಂದ ದಿನವಿಡೀ ವಿಚಾರಣೆ

ಅಜಿತ್‌ ಕುಮಾರ್‌ ರೈ
ಅಜಿತ್‌ ಕುಮಾರ್‌ ರೈ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕೆ.ಆರ್‌.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ಆರ್ಥಿಕ ವಹಿವಾಟಿನ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಾಹಿತಿಗಳ ಮಹಾಪೂರವೇ ಹರಿದು ಬರುತ್ತಿದೆ. ತನಿಖೆಯ ಆಳ–ಅಗಲ ಹಿಗ್ಗುತ್ತಲೇ ಇದೆ.

ಇದನ್ನು ಪೂರ್ತಿ ಓದಿ

5

ಏಕರೂಪ ನಾಗರಿಕ ಸಂಹಿತೆ ಅನಪೇಕ್ಷಿತ: ತನ್ನ ನಿಲುವನ್ನು ಪುನರುಚ್ಚರಿಸಿದ ಕಾಂಗ್ರೆಸ್‌

ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಕಾಂಗ್ರೆಸ್‌ ತಾನು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಯುಸಿಸಿ ಸಂಹಿತೆ ಜಾರಿಗೊಳಿಸುವುದರ ಅಗತ್ಯವಿಲ್ಲ ಈ ವಿಷಯದ ಕುರಿತು ವರದಿ ಅಥವಾ ಕರಡು ಮಸೂದೆ ಬಂದರೆ ಮತ್ತಷ್ಟು ಪ್ರತಿಕ್ರಿಯಿಸುವುದಾಗಿ ಹೇಳಿದೆ.

ಇದನ್ನು ಪೂರ್ತಿ ಓದಿ

6

ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಕೆಸಿಎನ್ ಮೋಹನ್ ನಿಧನ

 ಕೆಸಿಎನ್​ ಮೋಹನ್
ಕೆಸಿಎನ್​ ಮೋಹನ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್​ ಮೋಹನ್​ ಭಾನುವಾರ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. 

‘ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. 

ಇದನ್ನು ಪೂರ್ತಿ ಓದಿ

7

ಸಮೃದ್ಧಿ ಎಕ್ಸ್‌ಪ್ರೆಸ್‌ವೇ: 6 ತಿಂಗಳಲ್ಲಿ ಅಪಘಾತದಲ್ಲಿ 88 ಜನರ ಸಾವು- ಅಧಿಕಾರಿ

ಮುಂಬೈ: ಶನಿವಾರ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ 25 ಜನರು ಸೇರಿ ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಕಳೆದ ಆರು ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿ 88 ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಪೂರ್ತಿ ಓದಿ

8

Kichcha46 Demon War Begins: ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ಬಿಡುಗಡೆ

ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್ ನಟಿಸುತ್ತಿರುವ ಹೊಸ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

Kichcha46 Demon War Begins ಟೀಸರ್ ಅನ್ನು ಚಿತ್ರತಂಡ ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಈ ಮಾಹಿತಿಯನ್ನು ಕಿಚ್ಚ ಸುದೀಪ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಕಿಚ್ಚ ಕ್ರಿಯೇಶನ್ಸ್ ಅಡಿ ಚಿತ್ರ ನಿರ್ಮಾಣಗೊಳ್ಳುತ್ತಿದೆ.

ಇದನ್ನು ಪೂರ್ತಿ ಓದಿ

9

ಧ್ರುವ ಸರ್ಜಾ ಜೊತೆ ನಟಿಸಿದ್ದ ಬಾಡಿ ಬಿಲ್ಡರ್‌ ‘ಜೋ ಲಿಂಡ್ನರ್‘ 30ನೇ ವಯಸ್ಸಿಗೆ ನಿಧನ

ದ್ರುವ ಸರ್ಜಾ ಜೊತೆ ‘ಜೋ ಲಿಂಡ್ನರ್‘
ದ್ರುವ ಸರ್ಜಾ ಜೊತೆ ‘ಜೋ ಲಿಂಡ್ನರ್‘

ಬೆಂಗಳೂರು: ನಟ ಧ್ರುವ ಸರ್ಜಾ ನಾಯಕರಾಗಿದ್ದ ‘ಪೊಗರು‘ ಸಿನಿಮಾದಲ್ಲಿ ನಟಿಸಿದ್ದ, ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್​ ನಿಧನರಾಗಿದ್ದಾರೆ.


ಇದನ್ನು ಪೂರ್ತಿ ಓದಿ

10

ಗುಂಡ್ಲುಪೇಟೆ | ಕಾರು-ಟೆಂಪೊ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಸಜೀವ ದಹನ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಗೇಟ್ ಬಳಿ ಶನಿವಾರ ರಾತ್ರಿ ಟೆಂ‍ಪೊ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ, ಕಾರಿಗೆ ಬೆಂಕಿ ಹತ್ತಿಕೊಂಡು ಚಾಲಕ ಸಜೀವ ದಹನವಾಗಿದ್ದಾರೆ.

ಇದನ್ನು ಪೂರ್ತಿ ಓದಿ