ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಭೇಟಿ, ವಾಷಿಂಗ್ಟನ್ ಸುಂದರ್ ಭಾರತ ತಂಡಕ್ಕೆ ಮರಳಿದ್ದು ಸೇರಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ದಾಂಡೇಲಿ (ಉತ್ತರ ಕನ್ನಡ ಜಿಲ್ಲೆ): ‘ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೆ ತಂದಿದ್ದರಿಂದ ಮಹಿಳೆಯರೇ ಬಸ್ನಲ್ಲಿ ಹೆಚ್ಚು ಇರುತ್ತಾರೆ. ಗಂಡು ಮಕ್ಕಳಿಗೆ ಬಸ್ನಲ್ಲಿ ಜಾಗ ಸಿಗದಂತಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಆರ್.ವಿ.ದೇಶಪಾಂಡೆ ಶನಿವಾರ ಹೇಳಿದರು.
.ಬಸ್ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ.
ಕ್ವಾಲಾಲಂಪುರ: ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು. ನಂತರ, ಭಾರತ ಮತ್ತು ಮಲೇಷ್ಯಾ ಭಾನುವಾರ ರಕ್ಷಣೆ ಮತ್ತು ಭದ್ರತೆ, ಸೆಮಿಕಂಡಕ್ಟರ್ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಘೋಷಿಸಿದವು.
.ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ, ಭಾರತದ ಸಂದೇಶ ಸ್ಪಷ್ಟ: ಮಲೇಷ್ಯಾದಲ್ಲಿ ಮೋದಿ.
ಗಿರ್ ಸೋಮನಾಥ್ (ಗುಜರಾತ್): ಸುಮಾರು ಮೂರು ವರ್ಷಗಳ ಹಿಂದೆ ಶಿಕ್ಷೆ ಪೂರ್ಣಗೊಂಡಿದ್ದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದ 36 ವರ್ಷದ ಗುಜರಾತ್ ಮೂಲದ ಮೀನುಗಾರ ಕಳೆದ ತಿಂಗಳು ಜೈಲಿನಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಗಿರ್ ಸೋಮನಾಥ್ ಜಿಲ್ಲೆಯ ಅವರ ಹುಟ್ಟೂರಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಶಿಕ್ಷೆ ಮುಗಿದರೂ ಪಾಕ್ ಜೈಲಲ್ಲಿದ್ದ ಭಾರತೀಯ ಮೀನುಗಾರ ಸಾವು: ಮೃತದೇಹ ಗುಜರಾತ್ಗೆ.
ನವದೆಹಲಿ: ಗಡಿಯುದ್ದಕ್ಕೂ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ ಮಾರಕ ಘರ್ಷಣೆಗಳು ನಡೆದ ಕೆಲವೇ ದಿನಗಳ ನಂತರ ಮತ್ತು 2020ರಲ್ಲಿ ಜಗತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿದ್ದಾಗ ಚೀನಾ ರಹಸ್ಯವಾಗಿ ಪರಮಾಣು ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ.
.ಗಾಲ್ವಾನ್ ಕಣಿವೆ ಸಂಘರ್ಷದ ಬೆನ್ನಲ್ಲೇ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ: ಅಮೆರಿಕ.
ಮುಂಬೈ: ಟಿ20 ವಿಶ್ವಕಪ್ 2026ಕ್ಕೂ ಮೊದಲು ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ವಿಶೇಷವಾಗಿ, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫೆಬ್ರುವರಿ 12ರಂದು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
.T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್ರೌಂಡರ್ ತಂಡಕ್ಕೆ ವಾಪಸ್.
ಕೋಲಾರ: ‘ಅಬಕಾರಿ ಇಲಾಖೆಯಲ್ಲಿ ದುಡ್ಡು ತೆಗೆದುಕೊಂಡಿರುವುದಕ್ಕೆ ಈಗ ದಾಖಲೆ ಇದೆ. ₹25 ಲಕ್ಷ ತೆಗೆದು ಕೊಂಡು ಸಿಕ್ಕಿಬಿದ್ದಿದ್ದಾರೆ, ಮಂತ್ರಿ ಹೆಸರೂ ಬಂದಿದೆ. ಇದಕ್ಕಿಂತ ದಾಖಲೇ ಬೇಕೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
.ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್.ಡಿ.ಕುಮಾರಸ್ವಾಮಿ.
ಪುಣೆ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ 14 ವರ್ಷದ ಬಾಲಕನೊಬ್ಬ ಅಭ್ಯರ್ಥಿ ಹಾಗೂ ಆತನ ತಂದೆಯ ಜೊತೆ ಮತ ಚಲಾಯಿಸುತ್ತಿರುವಂತೆ ತೋರಿಸುವ ವಿಡಿಯೊ ಹರಿದಾಡುತ್ತಿದೆ.
.ಮಹಾರಾಷ್ಟ್ರ ಜಿಪಂ ಚುನಾವಣೆ: 14 ವರ್ಷದ ಬಾಲಕನಿಂದ ಮತದಾನ?.
ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಜೆಟ್ ತಯಾರಿಯಲ್ಲಿ ಸಿದ್ದರಾಮಯ್ಯ ತೊಡಗಿಕೊಂಡಿದ್ದರೆ, ‘ಮುಂದಿನದನ್ನು ಕಾಲವೇ ಹೇಳುತ್ತದೆ’ ಎಂಬ ನಂಬಿಕೆಯ ಮಾತುಗಳನ್ನು ಶಿವಕುಮಾರ್ ಪುನರುಚ್ಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರ ಮಾತುಗಳು ಪಕ್ಷದಲ್ಲಿ ಅಂತರ್ಕಲಹದ ಕಿಡಿ ಹೊತ್ತಿಸಿವೆ. ನಾಯಕರ ಆಪ್ತರು ದಿನಕ್ಕೊಂದು ಹೇಳಿಕೆಯ ಬಾಣ ಬಿಡತೊಡಗಿದ್ದಾರೆ.
.ಅಧಿಕಾರ ಹಸ್ತಾಂತರದ ಚರ್ಚೆ: ಬಜೆಟ್ ತಯಾರಿಯಲ್ಲಿ CM, 'ಸಮಯ'ದ ನಿರೀಕ್ಷೆಯಲ್ಲಿ DCM.
ಬೆಂಗಳೂರು: ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ಸಮಾಜದಲ್ಲಿ ಮಹಿಳೆ ಯರು ಎದುರಿಸುತ್ತಿರುವ ಕಾನೂನಿನ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ನೀಡುವ ಸೋಜ್ ಕೇಂದ್ರಕ್ಕೆ ರೀಚ್ಲಾಯರ್ನ ಸಂಸ್ಥಾಪಕ ಬಿ.ಟಿ. ವೆಂಕಟೇಶ ಶನಿವಾರ ಚಾಲನೆ ನೀಡಿದರು.
.ಬೆಂಗಳೂರು: ಸ್ತ್ರೀಯರ ಕಾನೂನು ಸಲಹೆಗೆ ‘ಸೋಜ್’.
ಬೆಂಗಳೂರು: ನಗರದ ಬನಶಂಕರಿ 6ನೇ ಹಂತದ 2ನೇ ಬಡಾವಣೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯು ಶನಿವಾರ ಬೋನು ಇರಿಸಿದೆ.
.ಬೆಂಗಳೂರು: ಬನಶಂಕರಿಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಬೋನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.