ಅಗರ್ತಲಾ:ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗೌರವ ಹಾಗೂ ಸೌಜನ್ಯದ ಸಂಕೇತವಾಗಿ400ಅನಾನಸ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.

ತ್ರಿಪುರತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯ ನಿರ್ದೇಶಕ ಡಾ. ಫನಿ ಭೂಷಣ್ ಜಮಾತಿಯಾ ಅವರು ಚಿತ್ತಗಾಂಗ್ನಲ್ಲಿರುವ ಭಾರತದ ಹೈಕಮಿಷನ್ ಕಾರ್ಯದರ್ಶಿ ಉದೊತ್ ಝಾ ಅವರಿಗೆಅಗರ್ತಲಾ ಚೆಕ್ಪೋಸ್ಟ್ ಬಳಿ ಹಣ್ಣುಗಳನ್ನು ನೀಡಿದರು. ಈ ವೇಳೆ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ಕೆ.ಚಕ್ಮಾ ಅವರು ಉಪಸ್ಥಿತರಿದ್ದರು.ಉದೊತ್ ಝಾ, ಬಾಂಗ್ಲಾ ಪ್ರಧಾನಿಗೆ ಹಣ್ಣುಗಳನ್ನು ತಲುಪಿಸಲಿದ್ದಾರೆ.

ಈ ವೇಳೆ ಮಾತನಾಡಿದಉದೊತ್ ಝಾ ಅವರು, ʼಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರತ್ತತ್ರಿಪುರ ಮುಖ್ಯಮಂತ್ರಿತೋರಿರುವ ಸೌಹಾರ್ದಯುತ ನಡೆಯು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧವನ್ನು ದೀರ್ಘಕಾಲದವರೆಗೆ ಗಟ್ಟಿಗೊಳಿಸುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು,ʼತ್ರಿಪುರ ಸರ್ಕಾರ ಮತ್ತು ಮುಖ್ಯಮಂತ್ರಿ ಅವರಿಗೆ ಅವರ ಸೌಹಾರ್ದ ನಡೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆʼ ಎಂದೂ ಹೇಳಿದ್ದಾರೆ.

ʼತ್ರಿಪುರ ಮತ್ತು ಬಾಂಗ್ಲಾದೇಶದ ಸಂಬಂಧ ಬಲವಾಗಿದೆ. ಆಮದು-ರಫ್ತು ವ್ಯಾಪಾರ ಮತ್ತು ವೈದ್ಯಕೀಯ ಪ್ರವಾಸೋದ್ಯಮದ ಅವಕಾಶಗಳನ್ನು ಹೆಚ್ಚಿಸಲುಹೆಚ್ಚಿನ ಅವಕಾಶಗಳಿವೆʼ ಎಂದು ಟಿ.ಕೆ.ಚಕ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೈವಿಧ್ಯಮಯ ಅನಾನಸ್ಗಳನ್ನು ತ್ರಿಪುರದತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯು ಕುಮಾರ್ಘಾಟ್ ಮತ್ತು ಒಂಪಿ ಪ್ರದೇಶಗಳಿಂದಸಂಗ್ರಹಿಸಿತ್ತು.

ಬಾಂಗ್ಲಾ ಪ್ರಧಾನಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತ್ರಿಪುರ ಸೇರಿದಂತೆ ತನ್ನ ನೆರಯಲ್ಲಿರುವ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆಹರಿಭಂಗಾ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.