ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್ ) 8 ಲೋಕಸಭಾಕ್ಷೇತ್ರಗಳಲ್ಲಿ ಮುಂದಿದೆ. ಒಟ್ಟು 17 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ಅವರ ಪುತ್ರಿ ಹಾಲಿ ಸಂಸದೆಕೆ.ಕವಿತಾ 37 ಸಾವಿರ ಮತಗಳಿಂದ ಹಿಂದಿದ್ದಾರೆ.
ಕವಿತಾ ಅವರು ಸ್ಪರ್ಧಿಸಿರುವ ನಿಜಾಮಾಬಾದ್ ಕ್ಷೇತ್ರದಲ್ಲಿ ಇವರ ಪ್ರತಿಸ್ಪರ್ಧಿ ಬಿಜೆಪಿಯ ಅರವಿಂದ ಧರ್ಮಪುರಿ 37 ಸಾವಿರ ಮತಗಳಿಂದ ಮುಂದಿದ್ದಾರೆ.ತೆಲಂಗಾಣದ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಸಿಕಂದರಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 36 ಸಾವಿರ ಮತಗಳ ಅಂತರದಲ್ಲಿ ಮುಂದಿದ್ದಾರೆ.

ಬಿಜೆಪಿಯ ಅಭ್ಯರ್ಥಿಗಳು ತೆಲಂಗಾಣದ ಕರೀಂನಗರ, ಅದಿಲಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ 20 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.ಕಾಂಗ್ರೆಸ್ ಪಕ್ಷದ ತೆಲಂಗಾಣ ರಾಜ್ಯಾಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ನಲಮಾಡ ಅವರು ನಲಗೊಂಡ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.ಇತರೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.2014ರ ಲೋಕಸಭಾ ಚುನಾವಣೆಯಲ್ಲಿ ಟಿಆರ್‌ಎಸ್ 11 ಕ್ಷೇತ್ರಗಳನ್ನು ತನ್ನಗಾಸಿಕೊಂಡಿತ್ತು. ಕಾಂಗ್ರೆಸ್ 2, ಬಿಜೆಪಿ, ವೈಎಸ್ ಆರ್ , ಟಿಡಿಪಿ , ಅಸಾದುದ್ದೀನ್ ಓವೈಸಿತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.