ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಸೇನಾ | ಸಂಸದರ ಪಕ್ಷಾಂತರ ವಿಷಯ; ಶಿಂದೆ – ಉದ್ಧವ್ ಬಣದ ಜಟಾಪಟಿ

Published 8 ಜೂನ್ 2024, 14:18 IST
Last Updated 8 ಜೂನ್ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ನೂತನವಾಗಿ ಆಯ್ಕೆಯಾದ ಶಿವಸೇನಾ (ಯುಬಿಟಿ) ಬಣದ ಇಬ್ಬರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಮುಖಂಡರು ಹೇಳಿದ್ದಾರೆ. ಇದಕ್ಕೆ ಉದ್ಘವ್ ಠಾಕ್ರೆ ಬಣ ತಿರುಗೇಟು ನೀಡಿದೆ.

ಶಿವಸೇನಾ (ಯುಬಿಟಿ) ಬಣದ ಮುಖಂಡ ಸಚಿನ್ ಅಹಿರ್ ಪ್ರತಿಕ್ರಿಯಿಸಿ, ‘ಈ ವರ್ಷದ ದ್ವಿತಿಯಾರ್ಧದಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪರಾಭವಗೊಳ್ಳುವ ಭೀತಿಯಿಂದ, ಶಿವಸೇನಾದ ಮುಖಂಡರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದಿದ್ದಾರೆ.

ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಶಿವಸೇನಾ ವಕ್ತಾರ ನರೇಶ್ ಮಹಸ್ಕೆ ಮಾತನಾಡಿ, ‘ಪಕ್ಷದ ಗೆಲುವಿಗಾಗಿ ಉದ್ಧವ್ ಅವರು ಕೆಲ ಸಮುದಾಯದ ಮತ ಕೇಳಿರುವ ರೀತಿಗೆ ಸಂಸದರು ಸಂತುಷ್ಟರಾಗಿಲ್ಲ. ಹೀಗಾಗಿ ಅವರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನು ಇರುವುದರಿಂದ ನಮ್ಮ ಸಂಪರ್ಕದಲ್ಲಿರುವ ಇಬ್ಬರು ಸಂಸದರ ಹೆಸರನ್ನು ಈಗಲೇ ಬಹಿರಂಗಗೊಳಿಸುವುದಿಲ್ಲ. ಕೆಲವೇ ದಿನಗಳಲ್ಲಿ ಇನ್ನೂ ನಾಲ್ಕು ಸಂಸದರು ಏಕನಾಥ ಶಿಂದೆ ಬಣ ಸೇರಲಿದ್ದಾರೆ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವತ್, ‘ಶಿಂದೆ ಬಣದ ಶಾಸಕರು ಹಾಗೂ ಸಂಸದರು ನಮ್ಮ ಬಣವನ್ನು ಶೀಘ್ರದಲ್ಲಿ ಸೇರಲಿದ್ದಾರೆ’ ಎಂದಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿಂದೆ ನೇತೃತ್ವದ ಶಿವಸೇನಾ 7 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆ. ಉದ್ಧವ್ ಠಾಕ್ರೆ ಬಣ 9 ಕ್ಷೇತ್ರಗಳನ್ನು ಗೆದ್ದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT