ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪ್ರಮಾಣಪತ್ರಗಳ ಮೇಲೆ ಆಧಾರ್ ಸಂಖ್ಯೆ ಮುದ್ರಿಸಲು ಯುಜಿಸಿ ನಿರ್ಬಂಧ

Published 2 ಸೆಪ್ಟೆಂಬರ್ 2023, 11:12 IST
Last Updated 2 ಸೆಪ್ಟೆಂಬರ್ 2023, 11:12 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಪದವಿ ಪ್ರಮಾಣಪತ್ರಗಳು ಹಾಗೂ ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ‌ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಮುದ್ರಿಸದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.  

‘ನೇಮಕಾತಿ ಅಥವಾ ಪ್ರವೇಶದ ಸಮಯದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಹಾಗೂ ನಂತರ ಇತರ ಬಳಕೆಗಾಗಿ ಪದವಿ ಪ್ರಮಾಣಪತ್ರ ಹಾಗೂ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ಆಧಾರ್‌ ಸಂಖ್ಯೆಯನ್ನು ಮುದ್ರಿಸಲು ರಾಜ್ಯ ಸರ್ಕಾರಗಳು ಪರಿಗಣಿಸುತ್ತಿವೆ’ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಯುಜಿಸಿಯು ಈ ನಿರ್ದೇಶನ ನೀಡಿದೆ. 

‘ಪದವಿಗಳು ಮತ್ತು ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ಆಧಾರ್ ಸಂಖ್ಯೆಗಳನ್ನು ಮುದ್ರಿಸಲು ಅನುಮತಿಯಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಯುಐಡಿಎಐನ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT