ಶಹಜಹಾನ್ಪುರ: ಗೆಳೆಯರೊಂದಿಗೆ ಮೊಬೈಲ್ನಲ್ಲಿ ಮಾತನಾಡಿದ 22 ವರ್ಷದ ಯುವತಿಯನ್ನು, ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಶಹಜಹಾನ್ಪುರ ಜಿಲ್ಲೆಯ ಇತೊರ ಗೊತಿಯಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತ ಯುವತಿಯನ್ನು ನೈನಾ ದೇವಿ ಎಂದು ಗುರುತಿಸಲಾಗಿದೆ.

ತನ್ನ ತಂಗಿಯು ಹಲವು ಪುರುಷರೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಳು ಹಾಗೂ ಮದುವೆ ಪ್ರಸ್ತಾಪಗಳನ್ನು ತಳ್ಳಿಹಾಕುತ್ತಿದ್ದಳು ಎಂದು ಆರೋಪಿ ಷೇರ್ ಸಿಂಗ್ ಹೇಳಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

'ನೈನಾ ಅವರ ಮೊಬೈಲ್ನಲ್ಲಿದ್ದ ಕಾಲ್ ರೆಕಾರ್ಡ್ಗಳನ್ನು ಆಲಿಸಿದ ನಂತರ ಆರೋಪಿ ಸಿಟ್ಟಾಗಿದ್ದ. ಆಕೆ ಮತ್ತೊಮ್ಮೆ ಮೊಬೈಲ್ ತೆಗೆದುಕೊಳ್ಳಲು ಬಂದಾಗ, ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಕೋಪದ ಭರದಲ್ಲಿ ಆರೋಪಿಯು ಹರಿತವಾದ ಆಯುಧದಿಂದ ಕುತ್ತಿಗೆಗೆ ಇರಿದಿದ್ದರಿಂದ, ಆಕೆ ಮೃತಪಟ್ಟಿದ್ದಾಳೆ' ಎಂದು ವಿವರಿಸಿದ್ದಾರೆ.

ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಂಗಳವಾರ ರಾತ್ರಿಯೇ ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
.ಮಹಾರಾಷ್ಟ್ರ: ಸೂಟ್ಕೇಸ್ನಲ್ಲಿ ಮಹಿಳೆ ಶವ ಪತ್ತೆ: ಸಹಜೀವನ ಸಂಗಾತಿಯಿಂದಲೇ ಕೃತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.