ಪಿಲಿಭಿತ್ (ಉತ್ತರ ಪ್ರದೇಶ): ಬಿಎಸ್ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನರಿಂದ ಹಲವು ಬಾರಿ ಅತ್ಯಾಚಾರ ಎಸಗಿ, ವಿಡಿಯೊ ಚಿತ್ರೀಕರಿಸಿ, ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾದ ನಂತರ, ತನ್ನ ಅತ್ತೆಯೊಂದಿಗೆ ಗ್ರಾಮದ ಹೊರಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಪತಿ ಬಿಎಸ್ಎಫ್ನಲ್ಲಿದ್ದಾರೆ, ಇಬ್ಬರು ಮೈದುನರು ಮನೆಗೆ ನುಗ್ಗಿ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
.ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳು ಸ್ಥಳಾಂತರ.ಪುಣೆ | ಯುವತಿಗೆ ಲೈಂಗಿಕ ದೌರ್ಜನ್ಯ, ಮೂವರು ಮಹಿಳೆಯರ ಬಳಿ ಚಿನ್ನಾಭರಣ ದರೋಡೆ.
'ಅತ್ಯಾಚಾರ ಎಸಗಿದ ವಿಡಿಯೊಗಳನ್ನು ಚಿತ್ರೀಕರಿಸಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ನನ್ನ ಅತ್ತೆ ಮತ್ತು ಮಾವ ಇಬ್ಬರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ವಿಡಿಯೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ' ಎಂದೂ ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಯ ದೂರಿನ ಮೇರೆಗೆ ಅತ್ತೆ ಮತ್ತು ಮಾವ ಸೇರಿದಂತೆ ಏಳು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಹಾನಾಬಾದ್ ಪೊಲೀಸ್ ಠಾಣಾಧಿಕಾರಿ ಮನೋಜ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಮೈದುನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.
.ಜುಲೈ 7ರಂದು ಟ್ರಂಪ್-ನೆತನ್ಯಾಹು ಭೇಟಿ: ಕದನ ವಿರಾಮದ ಬಗ್ಗೆ ಮಾತುಕತೆ ಸಾಧ್ಯತೆ.ಭಯೋತ್ಪಾದಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ; ವಿಶ್ವಸಂಸ್ಥೆಯಲ್ಲಿ ಜೈಶಂಕರ್.‘ಜಸ್ಟ್ ಮ್ಯಾರೀಡ್’ನಲ್ಲಿ ಅಚ್ಯುತ್ ಕುಮಾರ್: ಕರುಣಾಕರನಾಗಲಿದ್ದಾರೆ ಹಿರಿಯ ನಟ.ಹಾಸನ: ಹೆಚ್ಚಿದ ಹೃದಯಾಘಾತ, ಒಂದೂವರೆ ತಿಂಗಳಲ್ಲಿ 21 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.