ನವದೆಹಲಿ: ಕೇಂದ್ರ ಲೋಕಸೇವಾ ಆಯೋಗಕ್ಕೆ ಆಯ್ಕೆಯಾದ 1,009 ಅಭ್ಯರ್ಥಿಗಳಲ್ಲಿ, ಸಾಮಾನ್ಯ ವರ್ಗದಿಂದ 335, ಆರ್ಥಿಕವಾಗಿ ದುರ್ಬಲ ವರ್ಗದಿಂದ 109, ಹಿಂದುಳಿದ ವರ್ಗಗಳಿಂದ 318, ಪರಿಶಿಷ್ಟ ಜಾತಿಯಿಂದ 160 ಹಾಗೂ ಪರಿಶಿಷ್ಟ ಪಂಗಡದಿಂದ 87 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸರ್ಕಾರದ ವರದಿಯನ್ವಯ 1,129 ನಾಗರಿಕ ಸೇವಾ ಹುದ್ದೆಗಳು ಖಾಲಿ ಇದ್ದವು. ಇದರಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) 180, ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) 55, ಭಾರತೀಯ ಪೊಲೀಸ್ ಸೇವೆ (ಐಪಿಎಸ್) 147, ಕೇಂದ್ರ ಎ ಶ್ರೇಣಿಯ 605 ಹುದ್ದೆಗಳು, ಬಿ ಶ್ರೇಣಿಯ 142 ಹುದ್ದೆಗಳು ಖಾಲಿ ಇದ್ದವು. ಇವುಗಳಿಗೆ ಕೇಂದ್ರ ಲೋಕಸೇವಾ ಆಯೋಗದ ಮೂಲಕ 2024ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು.
.UPSC Results: ನಾಗರಿಕ ಸೇವಾ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಐಚ್ಛಿಕ ವಿಷಯಗಳಿವು.UPSC Results: ಶಕ್ತಿ ದುಬೆಗೆ ಪ್ರಥಮ ರ್ಯಾಂಕ್; 1009 ಅಭ್ಯರ್ಥಿಗಳು ಆಯ್ಕೆ.
ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ. ಉಳಿದಂತೆ 241 ಅಭ್ಯರ್ಥಿಗಳ ಹೆಸರುಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸೇರಿಸಲಾಗಿದೆ. ಒಬ್ಬ ಅಭ್ಯರ್ಥಿಯ ಫಲಿತಾಂಶ ತಡೆಹಿಡಿಯಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇನ್ನೂ 230 ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಆಯೋಗ ಹೇಳಿದೆ.

ದೆಹಲಿಯಲ್ಲಿರುವ ನಾಗರಿಕ ಸೇವಾ ಆಯೋಗದ ಕಚೇರಿಯಲ್ಲಿರುವ ಪರೀಕ್ಷಾ ಕೊಠಡಿಯಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. ಪರೀಕ್ಷೆ ಅಥವಾ ನೇಮಕಾತಿ ಕುರಿತು ಈ ಕೇಂದ್ರದಿಂದ ಅಭ್ಯರ್ಥಿಗಳು ಮಾಹಿತಿ ಅಥವಾ ಸ್ಪಷ್ಟನೆ ಪಡೆಯಬಹುದು. ಈ ಕೇಂದ್ರವು ಕೆಲಸದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯ ನಿರ್ವಹಿಸಲಿದೆ. ದೂರವಾಣಿ 011- 23385271/ 23381125/ 23098543 ಮೂಲಕವೂ ಮಾಹಿತಿ ಪಡೆಯಬಹುದು ಎಂದು ಆಯೋಗ ಹೇಳಿದೆ.

ಫಲಿತಾಂಶವು www.upsc.gov.in ಅಂತರ್ಜಾಲ ಪುಟದಲ್ಲಿ ಲಭ್ಯ. ಫಲಿತಾಂಶ ಘೋಷಣೆಯಾದ ದಿನದಿಂದ 15 ದಿನಗಳವರೆಗೆ ಅಂಕಗಳು ಲಭ್ಯ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
.UPSC Results: ಯುಪಿಎಸ್ಸಿ ಫಲಿತಾಂಶ ಪ್ರಕಟ, 50ರ ಒಳಗೆ ರಾಜ್ಯದ ಇಬ್ಬರು ವೈದ್ಯರು.UPSC, KPSC Exams: ಬಹುಆಯ್ಕೆಯ ಪ್ರಶ್ನೋತ್ತರಗಳು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.