ಡೆಹ್ರಾಡೂನ್: ಚಳಿಗಾಲದ ವಿರಾಮದ ಬಳಿಕ ಬದರಿನಾಥ ದೇವಾಲಯದ ದ್ವಾರಗಳನ್ನು ಮೇ 18ರಂದು ಭಕ್ತಾಧಿಗಳಿಗಾಗಿ ತೆರೆಯಲಾಗುವುದು.

‘ಉತ್ತರಾಖಂಡ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವು ಚಳಿಗಾಲದ ವಿರಾಮದಿಂದಾಗಿ ಮುಚ್ಚಲ್ಪಟ್ಟಿತ್ತು. ಭಕ್ತರಿಗಾಗಿಮೇ 18 ರಂದು ಬೆಳಿಗ್ಗೆ 4.15 ಕ್ಕೆ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು’ ಎಂದು ಚಾರ್‌ಧಾಮ್‌ದೇವಸ್ಥಾನಂ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮಂಗಳವಾರ ತೆಹ್ರಿ ಮಹಾರಾಜರ ನರೇಂದ್ರ ಅರಮನೆಯಲ್ಲಿ ವಸಂತ ಪಂಚಮಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ಕಳೆದ ವರ್ಷ ಕೊರೊನಾ ಸೋಂಕಿನ ಕಾರಣ ದೇವಸ್ಥಾನವನ್ನು ಪುನಃ ತೆರೆಯುವುದು ಇನ್ನಷ್ಟು ವಿಳಂಬವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.