ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬಾವಿಯೊಂದನ್ನು ಸ್ವಚ್ಛಗೊಳಿಸುವಾಗ ಮೂವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಬುಧವಾರ ಘಟನೆ ನಡೆದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಕಾಲಿನ ಬಳಿ ಅಂಬೇಡ್ಕರ್ ಫೋಟೊ ಸ್ವೀಕರಿಸಿದ ಬಿಹಾರ ಮಾಜಿ ಸಿಎಂ ಲಾಲು: ಬಿಜೆಪಿ ಕಿಡಿ.
ಜಹಾಗಿರ್ಪುರ ಪ್ರದೇಶದಲ್ಲಿ ಮಧ್ಯಾಹ್ನ ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಬಿಂದೇಶ್ವರ ರೈ (50), ವಿಕೇಶ್ ಕುಮಾರ್ (30) ಹಾಗೂ ರೋಹಿತ್ ಕುಮಾರ (21) ಮೃತ ದುರ್ದೈವಿಗಳು.

ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಬಾವಿಯಿಂದ ಶವಗಳನ್ನು ಹೊರತೆಗೆದಿದ್ದಾರೆ. ವಿಷಕಾರಿ ಅನಿಲ ಉಸಿರಾಡಿ ಪ್ರಜ್ಞೆ ತಪ್ಪಿರಬಹುದು ಎಂದು ಮೂವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈಶಾಲಿ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮನ್ ಆನಂದ್ ತಿಳಿಸಿದ್ದಾರೆ.
.ಬಿಹಾರ | ಪ್ರಶಾಂತ್ ಕಿಶೋರ್ 'ರಾಜಕೀಯ ವ್ಯಾಪಾರಿ': ಜೆಡಿ(ಯು) ನಾಯಕ ಆರೋಪ.
ಮರಣೋತ್ತರ ಪರೀಕ್ಷೆಯ ನಂತರ ಘಟನೆಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
.ಬಿಹಾರ | ಮಿಂಚು, ಸಿಡಿಲಾಘಾತ: ಸಾವಿನ ಸಂಖ್ಯೆ 61ಕ್ಕೇರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.