ಪಟ್ನಾ: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ವಿರುದ್ಧ ಬಿಹಾರ ಸಚಿವ ಹಾಗೂ ಜೆಡಿ(ಯು) ಹಿರಿಯ ನಾಯಕ ಅಶೋಕ್ ಚೌಧರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅಶೋಕ್ ಚೌಧರಿ ತಮ್ಮ ಮಗಳಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಲಂಚ ನೀಡಿದ್ದರು ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದ್ದರು.

ಚೌಧರಿ ಅವರ ಪುತ್ರಿ ಶಾಂಭವಿ ಸಮಷ್ಟಿಪುರ ಮೀಸಲು ಕ್ಷೇತ್ರದಲ್ಲಿ ಲೋಕ ಜನಶಕ್ತಿ ಪಕ್ಷದಿಂದ(ರಾಮ್ ವಿಲಾಸ್) ಸಂಸದರಾಗಿ ಆಯ್ಕೆಯಾಗಿದ್ದಾರೆ.

'ನನ್ನ ಮಗಳು ಹಾಗೂ ನನ್ನ ವಿರುದ್ಧ ಪ್ರಶಾಂತ್ ಕಿಶೋರ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಅವರಿಗೆ ಕಾನೂನಿನ ಮೂಲಕವೇ ನೋಟಿಸ್ ಕಳುಹಿಸಿದ್ದೇನೆ. ಅದಕ್ಕೆ ಅವರು ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಚೌಧರಿ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ತಮ್ಮ ಹೇಳಿಕೆಯನ್ನು ಸೂಕ್ತ ದಾಖಲೆಗಳ ಮೂಲಕ ಸಮರ್ಥಿಸಿಕೊಳ್ಳಲಿ ಅಥವಾ ತಪ್ಪಾಗಿದ್ದರೆ ಕ್ಷಮೆಯಾಚಿಸಲಿ. ಅವರು ಇವೆರಡನ್ನೂ ಮಾಡದಿದ್ದರೆ, ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ತೆಗೆದುಕೊಂಡು ಹೋಗಲು ನಾನು ಸಿದ್ದ ಎಂದು ಹೇಳಿದರು.

ಹಣಕ್ಕಾಗಿ ಎಲ್ಲಾ ಪಕ್ಷಗಳಿಗೂ ಕೆಲಸ ಮಾಡಿರುವ ಪ್ರಶಾಂತ್ ಕಿಶೋರ್ ಅವರು ಒಬ್ಬ 'ರಾಜಕೀಯ ವ್ಯಾಪಾರಿ' ಎಂದು ಟೀಕಿಸಿದರು. ಪ್ರಕರಣದ ಇತ್ತೀಚಿನ ಬೆಳವಣಿಗೆ ಕುರಿತು ಇದುವರೆಗೂ ಪ್ರಶಾಂತ್ ಕಿಶೋರ್ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.