ಡೆಹ್ರಾಡೂನ್: ರಾಜ್ಯದ ಎಲ್ಲ ಶಾಲೆಗಳಲ್ಲಿ ವೇದಗಳು, ರಾಮಾಯಣ ಹಾಗೂ ಗೀತೆಯನ್ನು (ಭಗವದ್ಗೀತೆ) ಕಲಿಸಬೇಕು ಎಂದು ಉತ್ತರಾಖಂಡ ಶಿಕ್ಷಣ ಸಚಿವ ಧನ ಸಿಂಗ್ ರಾವತ್ ಹೇಳಿದ್ದಾರೆ.

ಉತ್ತರಾಖಂಡದ ಇತಿಹಾಸ ಮತ್ತು ಭೂಗೋಳದ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದಿದ್ದಾರೆ.

ನೂತನ ಶಿಕ್ಷಣ ನೀತಿಯ ಪ್ರಕಾರ, ವಿದ್ಯಾರ್ಥಿಗಳಿಗೆ ಪಠ್ಯಕ್ರಮವು ಭಾರತದ ಇತಿಹಾಸ ಮತ್ತು ಪರಂಪರೆಯನ್ನು ಆಧರಿಸಿರಬೇಕು. ವೇದ ಪುರಾಣ ಹಾಗೂ ಗೀತೆಯ ಜೊತೆಗೆ ಸ್ಥಳೀಯ ಭಾಷೆಗಳಿಗೂ ಪ್ರೋತ್ಸಾಹಿಸಬೇಕು.

ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಮೊದಲ ರಾಜ್ಯ ಉತ್ತರಾಖಂಡ. 'ಶೀಘ್ರದಲ್ಲೇ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿ ಅಡಿಯಲ್ಲಿನ ವ್ಯವಸ್ಥೆಗೆ ಅನುಮೋದನೆ ಪಡೆಯಲಾಗುತ್ತದೆ' ಎಂದು ಶಿಕ್ಷಣ ಸಚಿವ ಧನ ಸಿಂಗ್ ರಾವತ್ ಹೇಳಿದ್ದಾರೆ.

ಇದನ್ನೂ ಓದಿ–ಗೌತಮ ಬುದ್ಧ ನಗರದಲ್ಲಿ ಸೆಕ್ಷನ್ 144; ಸಾರ್ವಜನಿಕವಾಗಿ ನಮಾಜ್, ಪೂಜೆಗೆ ನಿರ್ಬಂಧ

ಉತ್ತರಾಖಂಡ ಹೋರಾಟ ಮತ್ತು ಅಲ್ಲಿನ ಪ್ರಮುಖ ವ್ಯಕ್ತಿಗಳ ಕುರಿತು ಹೊಸ ಪಠ್ಯದಲ್ಲಿ ಅಳವಡಿಸುತ್ತಿರುವುದು ತಿಳಿದು ಬಂದಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.