ಗಯಾ (ಬಿಹಾರ): ಜಿಲ್ಲೆಯ ಬುಧೌಲ್ ಎಂಬ ಹಳ್ಳಿಯ ಜನರು ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಹಳ್ಳಿಯ ಜನರು ಹೇಳುವ ಪ್ರಕಾರ ಕಳೆದ 30 ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ.

ಸಾಮಾಜಿಕ ಕಾರ್ಯಕರ್ತ ಚಿತ್ರಾಂಜನ್ ಕುಮಾರ್ ಎನ್ನುವವರು, ‘ಇಲ್ಲಿನನಿವಾಸಿಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನುಒತ್ತಾಯಿಸಿದ್ದರು. ಆದರೆ, ಅವರ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.ಇತ್ತೀಚೆಗೆ ಪಂಚಾಯಿತಿ ಸಭೆ ನಡೆಸಿದ ಜನರು, ಸೇತುವೆ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದರು’ ಎಂದಿದ್ದಾರೆ.

ಮುಂದುವರಿದು, ‘ಹಳ್ಳಿಯ ಜನರು ಅಗತ್ಯ ಸರಕುಗಳನ್ನು ಒಟ್ಟುಗೂಡಿಸಿದ್ದಾರೆ. ಕೆಲವರು ಕಾರ್ಮಿಕರಾಗಿ ದುಡಿಯುತ್ತಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಹಳ್ಳಿಯ ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ಜನರು ಪಕ್ಕದ ಊರಿಗೆ ಹೋಗಲು ಸುಮಾರು 15 ಕಿ.ಮೀ ದೂರ ಸಾಗಬೇಕಿತ್ತು. ಸದ್ಯ ನದಿಗೆ ಅಡ್ಡಲಾಗಿ ಈ ನೇತುವೆ ನಿರ್ಮಿಸುತ್ತಿರುವುದರಿಂದ, ಪಕ್ಕದ ಊರಿಗೆ ಹೋಗಲು ಇದ್ದ ದೂರ ಕೇವಲ ಒಂದು ಕಿ.ಮೀ ಇಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.