ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬ್‌ ಬೆದರಿಕೆ, ಆತಂಕ: ‘ವಿಸ್ತಾರ’ ವಿಮಾನ ಶೋಧ

Published 28 ಜೂನ್ 2024, 16:21 IST
Last Updated 28 ಜೂನ್ 2024, 16:21 IST
ಅಕ್ಷರ ಗಾತ್ರ

ಮುಂಬೈ: ತಿರುವನಂತಪುರ –ಮುಂಬೈ ನಡುವಿನ ‘ವಿಸ್ತಾರ’ ಸಂಸ್ಥೆ ವಿಮಾನದಲ್ಲಿ ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆ ಪತ್ರ ಲಭಿಸಿದ್ದು, ತೀವ್ರ ಶೋಧ ಕಾರ್ಯ ನಡೆಯಿತು.

‘ವಿಮಾನದಲ್ಲಿ ಬಾಂಬ್ ಇದೆ’ ಎಂದು ಬರೆಯಲಾಗಿದ್ದ ಪತ್ರವೊಂದು ವಿಮಾನದ ಸಿಬ್ಬಂದಿ ಒಬ್ಬರಿಗೆ ಸಿಕ್ಕಿತ್ತು ಎಂದು ಸಹರ್ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ 3.15ಕ್ಕೆ ಇಳಿಯಿತು. ‍ವಿಮಾನಕ್ಕೆ ಬಾಂಬ್ ಬೆದರಿಕೆ ಇರುವ ಕುರಿತು ಪ್ರಯಾಣಿಕರಿಗೆ ಮಾಹಿತಿಯನ್ನು ನೀಡಿ ತಪಾಸಣೆ ನಡೆಸಲಾಯಿತು.

ತಪಾಸಣೆಯಲ್ಲಿ ಶಂಕಿತ ಯಾವುದೇ ವಸ್ತು ಲಭಿಸಿಲ್ಲ. ಬೆದರಿಕೆ ಮಾಹಿತಿ ತಿಳಿದಂತೆ ಶಿಷ್ಟಾಚಾರದ ಅನುಸಾರ ತಪಾಸಣೆ ನಡೆಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT