ನವದೆಹಲಿ: ಮುಸ್ಲಿಂ ಲೀಗ್ ಸಂಸದರ ವಿರೋಧದ ನಡುವೆಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ವಕ್ಫ್ (ತಿದ್ದುಪಡಿ) ಮಸೂದೆ’ಗೆ ಅಂಕಿತ ಹಾಕಿದ್ದಾರೆ.

ಶನಿವಾರ ರಾತ್ರಿ ಮಸೂದೆಗೆ ಮುರ್ಮು ಅವರು ಒಪ್ಪಿಗೆ ನೀಡಿದ್ದು, ಇದು ಈಗ ಕಾಯ್ದೆಯಾಗಿದೆ.

ಇದೇ ವೇಳೆ ಮುರ್ಮು ಅವರು, ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ 2025 ಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ.

ಲೋಕಸಭೆಯ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಮಸೂದೆಗೆ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾಜ್ಯಸಭೆಯು ಶುಕ್ರವಾರ ನಸುಕಿನ 2.30ಕ್ಕೆ ಅಂಗೀಕಾರ ನೀಡಿತ್ತು. ಮಸೂದೆಯ ಪರವಾಗಿ 128 ಮಂದಿ, ವಿರುದ್ಧವಾಗಿ 95 ಮಂದಿ ಮತ ಚಲಾಯಿಸಿದ್ದರು.
.Waqf Amendment Bill | ವಕ್ಫ್ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ .
ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಬಾರದು ಎಂದು ಮುಸ್ಲಿಂ ಲೀಗ್ನ ಐವರು ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶನಿವಾರ ಒತ್ತಾಯಿಸಿದ್ದರು. ‘ಅಸಾಂವಿಧಾನಿಕವಾದ ಈ ಮಸೂದೆಯು ಜಾರಿಗೆ ಬರುವುದನ್ನು ತಡೆಯಬೇಕು’ ಎಂದು ಅವರು ಕೋರಿದ್ದರು.
.ವಕ್ಫ್ (ತಿದ್ದುಪಡಿ) ಮಸೂದೆಯಲ್ಲಿ ಹೊಸದೇನಿದೆ?.ವಕ್ಫ್ ಮಸೂದೆ: ರಾಷ್ಟ್ರಪತಿ ಮೊರೆಹೋದ ಮುಸ್ಲಿಂ ಲೀಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.