ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslide: ಮೃತದೇಹಗಳ ಗುರುತು ಪತ್ತೆಗೆ ಸಂಬಂಧಿಕರ DNA ಪರೀಕ್ಷೆ

Published : 5 ಆಗಸ್ಟ್ 2024, 3:00 IST
Last Updated : 5 ಆಗಸ್ಟ್ 2024, 3:00 IST
ಫಾಲೋ ಮಾಡಿ
Comments

ವಯನಾಡ್‌: ವಯನಾಡ್‌ನ ಮುಂಡಕ್ಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕಣ್ಮರೆಯಾದವರ ಪತ್ತೆಗೆ, ಜಿಲ್ಲಾಡಳಿತವು ಬದುಕಿಳಿದವರ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದೆ.

ಆರೋಗ್ಯ ಇಲಾಖೆಯು ಈ ಕೆಲಸ ಮಾಡುತ್ತಿದೆ. ಇದೇ ವೇಳೆ ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಯ ಮಾಹಿತಿ, ಆಧಾರ್‌ ಕಾರ್ಡ್ ಸಂಖ್ಯೆ ಹಾಗೂ ಅದಕ್ಕೆ ಜೋಡಿಸಲಾದ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ.

ರಕ್ಷಣಾ ಕಾರ್ಯಾಚರಣೆ ವೇಳೆ ಲಭಿಸಿರುವ ದೇಹದ ಭಾಗಗಳ ಗುರುತು ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆಗಾಗಿ ಸಂಬಂಧಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಮೊದಲ ಹಂತದಲ್ಲಿ ಗುರುತು ಪತ್ತೆಯಾಗದ ದೇಹಗಳ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಇವೆರಡನ್ನೂ ತಾಳೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಪ್ತ ಸಮಾಲೋಚನೆ ಮಾಡಿದ ಬಳಿಕ ಬದುಳಿಕದವರ ಹಾಗೂ ಸಂಬಂಧಿಕರಿಂದ ಡಿಎನ್‌ಎ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಕಾಣೆಯಾದವರ ಪತ್ತೆಗೆ ನಾಗರಿಕ ಸರಬರಾಜು ಇಲಾಖೆಯು ಗ್ರಾಮ ಪಂಚಾಯತ್‌ಗೆ ಮಾಹಿತಿ ಒದಗಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ರಾಜ್ಯ ಕಂದಾಯ ಸಚಿವ ಕೆ. ರಾಜನ್ ನೀಡಿದ ಮಾಹಿತಿ ಪ್ರಕಾರ ಈವರೆಗೂ 221 ಮೃತದೇಹಗಳು, 166 ದೇಹದ ಭಾಗಗಳು ಪತ್ತೆಯಾಗಿವೆ. ವಯನಾಡ್‌, ಮಲಪ್ಪುರಂ ಹಾಗೂ ಕೋಯಿಕ್ಕೋಡ್‌ ಜಿಲ್ಲೆಗಳಲ್ಲಿ ಹರಿಯುವ ಚಾಲಿಯಾರ್ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಈವರೆಗೂ ಚಾಲಿಯಾರ್‌ ನದಿಯಲ್ಲಿ 75 ಮೃತದೇಹಗಳು ಎಂದು 142 ದೇಹಗಳ ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT