ನವದೆಹಲಿ: ದತ್ತಾಂಶ ಹಂಚಿಕೊಳ್ಳುವಿಕೆಯ ಹೆಸರಿನಲ್ಲಿ ಭಾರತದ ಜನರ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಲು ಅವಕಾಶ ಕೊಡುವುದಿಲ್ಲ ಎಂದು ಮೆಟಾ ಪ್ಲಾಟ್ಫಾರ್ಮ್ಸ್ ಮತ್ತು ವಾಟ್ಸ್ಆ್ಯಪ್ ಅನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಖಾಸಗಿತನ ರಕ್ಷಣೆಗೆ ಸಂಬಂಧಿಸಿ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ವಿಧಿಸಿದ್ದ ₹213.14 ಕೋಟಿ ದಂಡದ ಆದೇಶವನ್ನು ಪ್ರಶ್ನಿಸಿ ಮೆಟಾ ಪ್ಲಾಟ್ಫಾರ್ಮ್ಸ್ ಮತ್ತು ವಾಟ್ಸ್ಆ್ಯಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಿಚಾರಣೆ ನಡೆಸಿತು.

ವಾಟ್ಸ್ಆ್ಯಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ, ತಮ್ಮ ಖಾಸಗಿತನ ನೀತಿಯನ್ನು ರೂಪಿಸಿಕೊಳ್ಳುವ ವಿಧಾನವನ್ನು ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪಿಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಪ್ರಶ್ನಿಸಿದೆ. ಗ್ರಾಹಕರೊಂದಿಗೆ ಮಾಡಿಕೊಂಡ ಅಸಮಾನ ಒಪ್ಪಂದಗಳ ಆಧಾರದಲ್ಲಿ ಅವರ ದತ್ತಾಂಶಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪೀಠವು ಹೇಳಿದೆ. ಈ ಕುರಿತು ಫೆಬ್ರುವರಿ 9ರಂದು ಮಧ್ಯಂತರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಜಾಹೀರಾತಿಗೆ ಸಂಬಂಧಿಸಿದಂತೆ ಸೀಮಿತ ದತ್ತಾಂಶ ಹಂಚಿಕೆಗೆ ಮಾತ್ರ ಅವಕಾಶ ಕೊಟ್ಟು, ಪ್ರಾಬಲ್ಯದ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಸಿಸಿಐ ಅಭಿಪ್ರಾಯವನ್ನು ಎತ್ತಿಹಿಡಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಆದೇಶವನ್ನೂ ಮೆಟಾ ಮತ್ತು ವಾಟ್ಸ್ಆ್ಯಪ್ ಪ್ರಶ್ನಿಸಿವೆ.

ಈ ಎರಡೂ ಸಂಸ್ಥೆಗಳು ‘ಈ ದೇಶದ ಸಂವಿಧಾನವನ್ನು ಅಣಕ ಮಾಡಿವೆ’ ಮತ್ತು ಈ ಸಂಸ್ಥೆಗಳ ನಡವಳಿಕೆಯು ‘ಖಾಸಗಿ ಮಾಹಿತಿಯನ್ನು ಸಭ್ಯವಾಗಿ ಕದಿಯುವಂತೆ ಇದೆ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಗ್ರಾಹಕರ ದತ್ತಾಂಶಗಳನ್ನು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಾಗ, ಭಾರತದ ಕಾನೂನಿನ ಅಡಿಯಲ್ಲಿ ಶ್ರದ್ಧೆಯಿಂದ ಸಂರಕ್ಷಿಸಿಕೊಂಡ ಬಂದಿರುವ ಖಾಸಗಿತನದ ಹಕ್ಕುಗಳ ಉಲ್ಲಂಘನೆಯಾಗುವ ಗಂಭೀರ ಅಪಾಯ ಉಂಟಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದಂಡದ ಹಣವನ್ನು ಠೇವಣಿ ಇರಿಸಲಾಗಿದೆ ಎಂದು ಮೆಟಾ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ವಾಟ್ಸ್ಆ್ಯಪ್ ಪರ ಹಿರಿ ವಕೀಲ ಅಖಿಲ್ ಸಿಬಲ್ ಪೀಠಕ್ಕೆ ತಿಳಿಸಿದರು.

ಈ ಪ್ಲಾಟ್ಫಾರ್ಮ್ಗಳ ಖಾಸಗಿತನ ನೀತಿಯ ಕುರಿತು ಪೀಠವು ಮತ್ತೆ ತನ್ನ ಕಳವಳ ವ್ಯಕ್ತಪಡಿಸಿತು.

2021ರ ಖಾಸಗಿತನ ನೀತಿಯನ್ನು ಒಪ್ಪಿಕೊಳ್ಳದ ಯಾವುದೇ ಬಳಕೆದಾರ ವಾಟ್ಸ್ಆ್ಯಪ್ ಬಳಸುವುದನ್ನು ನಿಷೇಧಿಸುವುದಿಲ್ಲ ಎಂದು ಸಂವಿಧಾನ ಪೀಠಕ್ಕೆ ಭರವಸೆ ನೀಡಲಾಗಿದೆ ಎಂಬ ವಿಚಾರವನ್ನು ರೋಹಟಗಿ ಅವರು ಪೀಠದ ಗಮನಕ್ಕೆ ತಂದರು.

ಮೆಟಾದೊಂದಿಗೆ ಆಗಲಿ ಅಥವಾ ಇತರ ಯಾರೊಂದಿಗೆ ಆಗಲಿ, ಒಂದೇ ಒಂದು ಮಾಹಿತಿ ಹಂಚಿಕೊಳ್ಳುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಾವು ಕಟ್ಟುನಿಟ್ಟಿನ ಆದೇಶವನ್ನು ನೀಡಲಿದ್ದೇವೆ ಮತ್ತು ಅದನ್ನು ಅನುಸರಿಸದೇ ಇದ್ದರೆ ಒಂದೇ ಸೆಕೆಂಡ್ನಲ್ಲಿ ನಿಮ್ಮನ್ನು ಆಚೆಗೆ ದಬ್ಬುತ್ತೇವೆ ಎಂದು ಪೀಠ ಹೇಳಿದೆ.

‘ಈ ಮಾರುಕಟ್ಟೆಯಲ್ಲಿ ನಿಮ್ಮ ಸಂಪೂರ್ಣ ಏಕಸ್ವಾಮ್ಯ ಇರುವುದರಿಂದ ಜನರಿಗೆ ಬೇರೆ ಯಾವ ಆಯ್ಕೆಗಳಿವೆ, ನಾವು ನಿಮಗೆ ಆಯ್ಕೆಯೊಂದನ್ನು ನೀಡುತ್ತೇವೆ ಎಂದರೆ, ಆ ಆಯ್ಕೆಯೇ ಒಂದು ಒಪ್ಪಂದದ ಹಾಗೆ– ನಿಮ್ಮ ದತ್ತಾಂಶವನ್ನು ನಾವು ಮಾರುತ್ತೇವೆ ಅಥವಾ ವಾಟ್ಸ್ಆ್ಯಪ್ನಿಂದ ನೀವು ಹೊರನಡೆಯಿರಿ ಎಂದು ಅದರ ಅರ್ಥ. ನಾವು ಅದಕ್ಕೆ ಏಕೆ ಅವಕಾಶ ಕೊಡಬೇಕು’ ಎಂದು ಪೀಠವು ಪ್ರಶ್ನಿಸಿದೆ.
.ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು.ಕನಿಷ್ಠ ವೇತನ | ಮನೆ ಕೆಲಸಗಾರರಿಗೆ ಕಾನೂನು ಆದೇಶ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್.ಏರ್ ಇಂಡಿಯಾ ವಿಮಾನ ದುರಂತ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.